ಚಿಕ್ಕಮಗಳೂರು : ಕಾಡು ಪ್ರಾಣಿ ಭೇಟೆಯಾಡುತ್ತಿದ್ದ ಮೂವರು ಅರಣ್ಯ ಅಧಿಕಾರಿಗಳ ಬಲೆಗೆ - Karavali Times ಚಿಕ್ಕಮಗಳೂರು : ಕಾಡು ಪ್ರಾಣಿ ಭೇಟೆಯಾಡುತ್ತಿದ್ದ ಮೂವರು ಅರಣ್ಯ ಅಧಿಕಾರಿಗಳ ಬಲೆಗೆ - Karavali Times

728x90

21 May 2026

ಚಿಕ್ಕಮಗಳೂರು : ಕಾಡು ಪ್ರಾಣಿ ಭೇಟೆಯಾಡುತ್ತಿದ್ದ ಮೂವರು ಅರಣ್ಯ ಅಧಿಕಾರಿಗಳ ಬಲೆಗೆ

ಮಂಗಳೂರು, ಮೇ 21, 2026 (ಕರಾವಳಿ ಟೈಮ್ಸ್) : ಚಿಕ್ಕಮಗಳೂರು ಜಿಲ್ಲೆಯ ಅತ್ತಿಗುಂಡಿ ಗ್ರಾಮದಿಂದ ಮಲಗಾರು ಗ್ರಾಮಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಮೇ 19 ರಂದು ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ವೆಂಕಟರಮಣ ಬಿನ್ ದಿ ಪೆÇನ್ನು ಸ್ವಾಮಿ (35), ತಮಿಳುನಾಡಿನ ಕನ್ನಿಯಪ್ಪನ್ ಬಿನ್ ದಿ ಗೋವಿಂದ ರಾಜು (25), ಸುರೇಶ ಬಿನ್ ಚಿನ್ನರಾಜು (20) ಎಂಬವರನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. 

ಚಿಕ್ಕಮಗಳೂರು ಸಿಐಡಿ ಪೆÇಲೀಸ್ ಅರಣ್ಯ ಸಂಚಾರಿ ದಳದ ಪೆÇಲೀಸರು ಪಂಚರ ಸಮಕ್ಷಮ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದಾಗ ಆರೋಪಿಗಳಿಂದ ಜಿಂಕೆ ಜಾತಿಗೆ ಸೇರಿದ ಪ್ರಾಣಿಯ ಕಳೆಬರಹ, ಬಿಳಿ ಬಣ್ಣದ 1 ಬಟ್ಟೆ ಬ್ಯಾಗ್, 2 ಹೆಡ್ ಲೈಟ್ ಗಳು, 2 ಕಾಡು ಜಾತಿಯ ಮರದ ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೆÇಲೀಸ್ ಉಪ ಮಹಾನಿರೀಕ್ಷಕಿ ಸಂಗೀತಾ. ಜಿ, ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೆÇಲೀಸ್ ಅಧೀಕ್ಷಕ  ಪವನ್ ನೆಜ್ಜೂರು ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಸಿಐಡಿ ಪೆÇಲೀಸ್ ಅರಣ್ಯ ಸಂಚಾರಿ ದಳದ ಪೆÇಲೀಸ್ ಉಪನಿರೀಕ್ಷಕ  ಬಾಬುದ್ದೀನ್ ಹಾಗೂ ಸಿಬ್ಬಂದಿಗಳಾದ ದೇವರಾಜ, ಕೃಷ್ಣರಾಜ್ ಅರಸ್, ದಿಲೀಪ್, ನಟರಾಜ್, ಹಾಲೇಶ್, ಹೇಮಾವತಿ, ಚಾಲಕರಾದ ತಿಮ್ಮಶೆಟ್ಟಿ ಪಾಲ್ಗೊಂಡಿರುತ್ತಾರೆ.

ಅರಣ್ಯ ಕಾಯ್ದೆ ಮತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕ ಪೆÇಲೀಸ್ ಅಧೀಕ್ಷಕರ ಕಛೇರಿ ದೂರವಾಣಿ ಸಂಖ್ಯೆ 9480800220 ಅಥವಾ ಸಿಐಡಿ ಪೆÇಲೀಸ್ ಅರಣ್ಯ ಸಂಚಾರಿ ದಳ ಮಂಗಳೂರು ಕಛೇರಿ ದೂರವಾಣಿ ಸಂಖ್ಯೆ 8277949810 ಗೆ ಮಾಹಿತಿ ನೀಡಬಹುದು ಎಂದು ಮಂಗಳೂರು ಸಿಐಡಿ ಪೆÇಲೀಸ್ ಅರಣ್ಯ ಸಂಚಾರಿ ದಳದ ಪೆÇಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಚಿಕ್ಕಮಗಳೂರು : ಕಾಡು ಪ್ರಾಣಿ ಭೇಟೆಯಾಡುತ್ತಿದ್ದ ಮೂವರು ಅರಣ್ಯ ಅಧಿಕಾರಿಗಳ ಬಲೆಗೆ Rating: 5 Reviewed By: karavali Times
Scroll to Top