ಸಂಗಬೆಟ್ಟು : ಇ-ಕಾರ್ಟ್ ಕಂಪೆನಿ ಡೆಲಿವರಿ ಸಿಬ್ಬಂದಿ ತಡೆದು ತಂಡದಿಂದ ಹಲ್ಲೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು - Karavali Times ಸಂಗಬೆಟ್ಟು : ಇ-ಕಾರ್ಟ್ ಕಂಪೆನಿ ಡೆಲಿವರಿ ಸಿಬ್ಬಂದಿ ತಡೆದು ತಂಡದಿಂದ ಹಲ್ಲೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು - Karavali Times

728x90

25 May 2026

ಸಂಗಬೆಟ್ಟು : ಇ-ಕಾರ್ಟ್ ಕಂಪೆನಿ ಡೆಲಿವರಿ ಸಿಬ್ಬಂದಿ ತಡೆದು ತಂಡದಿಂದ ಹಲ್ಲೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ, ಮೇ 25, 2026 (ಕರಾವಳಿ ಟೈಮ್ಸ್) : ಇ-ಕಾರ್ಟ್ ಕಂಪೆನಿಯ ಡೆಲಿವರಿ ಹಾಗೂ ಹಬ್ ಎಸಿಸ್ಟಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಾಹನ ತಡೆದು ಹಲ್ಲೆ ನಡೆಸಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅರಳ ಗ್ರಾಮದ ನಿವಾಸಿ ಮಹಮ್ಮದ್ ಆರೀಸ್ (20) ಎಂಬವರೇ ಹಲ್ಲೆಗೊಳಗಾದ ಕಂಪೆನಿ ಉದ್ಯೋಗಿ. ಇವರು ಇ-ಕಾರ್ಟ್ ಕಂಪೆನಿಯಲ್ಲಿ ಡೆಲಿವರಿ ಹಾಗೂ ಹಬ್ ಎಸಿಸ್ಟಂಟ್ ಆಗಿ ಮಾಡಿಕೊಂಡಿದ್ದು, ಪಾರ್ಸೆಲ್ ಡೆಲಿವೆರಿ ಮಾಡಲು ಲೊರೆಟ್ಟೋ ಎಂಬಲ್ಲಿಂದ ಕಂಪೆನಿಯ ಟಾಟಾ ಟೆಂಪೆÇ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಸಂಗಬೆಟ್ಟು ಗ್ರಾಮದ ಮಂಚಕಲ್ಲು ಎಂಬಲ್ಲಿ ತನ್ನ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವೇಳೆ ಹಿಂದಿನಿಂದ ಅಂದರೆ ಸಿದ್ದಕಟ್ಟೆ ಕಡೆಯಿಂದ ಮಂಚಕಲ್ಲು ಕಡೆಗೆ ಬುಲೆಟ್ ಬೈಕಿನಲ್ಲಿ ಬಂದ ಆರೋಪಿ ಮಧು ಎಂಬಾತ ಆರೀಸ್ ಅವರನ್ನುದ್ದೇಶಿಸಿ ಉಡಾಫೆ ಮಾತಾನಾಡಿದ್ದಾನೆ. ಈ ಸಂದರ್ಭ ಆರೀಸ್ ಅವರು ಈ ಬಗ್ಗೆ ತಕರಾರು ತೆಗೆದಿರುತ್ತಾರೆ. ನಂತರ ಆರೀಸ್ ಅಲ್ಲಿಂದ ಪಾರ್ಸೆಲ್ ಡೆಲಿವೆರಿ ಬಗ್ಗೆ ಎಳಿಯನಡುಗೋಡು ಗ್ರಾಮದ ಉಪ್ಪಿರಾ ಎಂಬಲ್ಲಿಗೆ ತಲುಪಿದಾಗ ಅದೇ ಬುಲೆಟ್ ಸವಾರ ಮಧು ಎಂಬಾತನು ವಾಹನವನ್ನು ತಡೆದು ನಿಲ್ಲಿಸಿ ನೀನು ಇಲ್ಲಿಂದ ಹೋಗಬಾರದು ನಿನ್ನ ಬಗ್ಗೆ ನಿನ್ನ ಕಂಪೆನಿಗೆ ಕಂಪ್ಲೇಟ್ ಮಾಡಬೇಕು. ನೀನು ಗಾಡಿಯನ್ನು ಇಲ್ಲಿಂದ ತೆಗಿಯಬೇಡ ಎಂದು ಹೇಳಿ ತಡೆದು ನಿಲ್ಲಿಸಿದಾಗ ಆರೀಸ್ ತನ್ನ ಮೊಬೈಲಿನಿಂದ ವಿಡಿಯೋ ತೆಗೆಯಲು ಯತ್ನಿಸಿದ್ದಾರೆ. ಅದೇ ವೇಳೆ ಅಲ್ಲಿಗೆ ಬಂದ ಮುಖ ಪರಿಚಯ ಇರುವ ಸಂದೀಪ, ನವೀನ ಹೆಗ್ಡೆ, ಯಶವಂತ ಆಚಾರ್ಯ ಮತ್ತು ಇತರ ಸುಮಾರು ಜನರು ಬುಲೆಟ್ ಸವಾರ ಮಧು ಎಂಬಾತನೊಂದಿಗೆ ಸೇರಿಕೊಂಡು ಆರೀಸ್ ಅವರನ್ನು ತಡೆದು ಎಳೆದಾಡಿದಾಡಿದ್ದು, ನೀನು ಬಾರಿ ವಿಡಿಯೋ ಮಾಡುತ್ತೀಯ ಎಂದು ಅವ್ಯಾಚವಾಗಿ ಬೈದು ಕೈಯಿಂದ ಹಲ್ಲೆ ಮಾಡಿರುತ್ತಾರೆ. ಹಲ್ಲೆಯಿಂದ ಗಾಯಗೊಂಡಿರುವ ಆರೀಸ್ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಂಗಬೆಟ್ಟು : ಇ-ಕಾರ್ಟ್ ಕಂಪೆನಿ ಡೆಲಿವರಿ ಸಿಬ್ಬಂದಿ ತಡೆದು ತಂಡದಿಂದ ಹಲ್ಲೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು Rating: 5 Reviewed By: karavali Times
Scroll to Top