![]() |
| ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ |
![]() |
| ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಜಯರಾಮ |
ಬಂಟ್ವಾಳ, ಮೇ 25, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಹಾಗೂ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಜಯರಾಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಉಮಾನಾಥ ರೈ ಮೇರಾವು ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿಮಲ್ ಕುಮಾರ್ ಕೆ ಎ, ಗೌರವಾಧ್ಯಕ್ಷರಾಗಿ ಶ್ರೀಮತಿ ವಾಣಿ, ಉಪಾಧ್ಯಕ್ಷರುಗಳಾಗಿ ಸಂತೋಷ್ ಕುಮಾರ್ ಹಾಗೂ ಆರತಿ ಕುಮಾರಿ, ಕೋಶಾಧಿಕಾರಿಯಾಗಿ ಸುರೇಶ್ ಎಂ, ಸಹಕಾರ್ಯದರ್ಶಿಗಳಾಗಿ ಸಂದೇಶ್ ಎಂ ಎಸ್ ಹಾಗೂ ಶ್ರೀಮತಿ ಹೇಮಲತಾ ಪಿ, ಸಂಘಟನಾ ಕಾರ್ಯದರ್ಶಿಗಳಾಗಿ ಜಯಂತ ಕೆ ಹಾಗೂ ನೀತಾ ಗಟ್ಟಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ ಪಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ಶಶಿ ಬಿ, ಕೋಶಾಧಿಕಾರಿಯಾಗಿ ಇಸ್ಮಾಲಿ ಪಿ, ಸಹ ಕಾರ್ಯದರ್ಶಿಗಳಾಗಿ ಶ್ರೀಮತಿ ಮಮತಾ ಪಿ ಹಾಗೂ ಪುಟ್ಟುರಂಗನಾಥ ಟಿ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪಾವತಿ ವೈ, ನಿರ್ದೇಶಕರುಗಳಾಗಿ ಶಿವಪ್ರಸಾದ್ ಶೆಟ್ಟಿ, ಫ್ರಾನ್ಸಿಸ್ ಡೇಸಾ, ಸುನಿಲ್ ಸಿಕ್ವೇರಾ, ಸಂತೋಷ್ ಕುಮಾರ್ ತುಂಬೆ, ರವಿಕುಮಾರ್, ಸಂದೇಶ ಎಂ ಎಸ್, ನೀತಾ ಗಟ್ಟಿ ಎಂ ಅವರು ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.











0 comments:
Post a Comment