ಬಂಟ್ವಾಳ, ಮೇ 25, 2026 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಹರುನಗರ ಶಾಲಾ ಬಳಿ ತ್ಯಾಜ್ಯ ರಾಶಿ ಬಿದ್ದಿರುವ ಬಗ್ಗೆ ಕರಾವಳಿ ಟೈಮ್ಸ್ ಸಚಿತ್ರ ವರದಿಗೆ ಸ್ಪಂದಿಸಿರುವ ನರಿಕೊಂಬು ಗ್ರಾಮ ಪಂಚಾಯತ್ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ಅಲ್ಲದೆ ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೂ ಮುಂದಾಗಿದೆ. ಈ ನಿಟ್ಟಿನಲ್ಲಿ ಪರಿಸರದಲ್ಲಿ ಸೀಸಿ ಟಿವಿ ಕಣ್ಗಾವಲು ಹಾಕಲಾಗಿದೆ. ಇನ್ನು ಮುಂದೆ ಶಾಲಾ ಪರಿಸರ ಸಹಿತ ಹೆದ್ದಾರಿಯ ಬದಿಗಳಲ್ಲಿ ಬೇಕಾಬಿಟ್ಟಿ ತ್ಯಾಜ್ಯ ಎಸೆಯುವವರ ವಿರುದ್ದ ಗರಿಷ್ಠ ದಂಡ ವಿಧಿಸುವ ಮೂಲಕ ಕಠಿನ ಕ್ರಮ ವಹಿಸಲಾಗುವುದು ಎಂದು ಪಂಚಾಯತ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ನರಿಕೊಂಬು ಪಂಚಾಯತಿನ ಈ ಕ್ರಮ ತಾತ್ಕಾಲಿಕವಾಗದೆ ನಿರಂತರ ಕಣ್ಗಾವಲು ಇಡಬೇಕಾಗಿದೆ. ಪಂಚಾಯತ್ ವತಿಯಿಂದ ಮನೆ ಮನೆ ಸಂಗ್ರಹಕ್ಕೆ ನಿತ್ಯವೂ ವಾಹನ ಕಳಿಸುವ ವ್ಯವಸ್ಥೆ ಮಾಡಬೇಕಲ್ಲದೆ ತ್ಯಾಜ್ಯ ವಿಲೇವಾರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಹೆದ್ದಾರಿ ಬದಿ ಸೇರಿದಂತೆ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ತ್ಯಾಜ್ಯ ಎಸೆಯುವವ ವಿರುದ್ದ ಕಠಿಣ ಕ್ರಮ ಮುಂದುವರೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.












0 comments:
Post a Comment