ಬಗ್ಗುಮೂಲೆ : ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರಿನಲ್ಲಿ ಬಂದ ಇಬ್ಬರಿಂದ ಹಲ್ಲೆ - Karavali Times ಬಗ್ಗುಮೂಲೆ : ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರಿನಲ್ಲಿ ಬಂದ ಇಬ್ಬರಿಂದ ಹಲ್ಲೆ - Karavali Times

728x90

6 May 2026

ಬಗ್ಗುಮೂಲೆ : ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರಿನಲ್ಲಿ ಬಂದ ಇಬ್ಬರಿಂದ ಹಲ್ಲೆ

ಬಂಟ್ವಾಳ, ಮೇ 06, 2026 (ಕರಾವಳಿ ಟೈಮ್ಸ್) : ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರಿನಲ್ಲಿ ಬಂದ ಇಬ್ಬರು ಹಲ್ಲೆ ನಡೆಸಿದ ಘಟನೆ ಕಬಕ ಸಮೀಪದ ಕುಳ ಗ್ರಾಮದ ಬಗ್ಗುಮೂಲೆ ಎಂಬಲ್ಲಿ ಮೇ 5 ರಂದು ಅಪರಾಹ್ನದ ವೇಳೆ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಕುಳ ಗ್ರಾಮದ ಬಗ್ಗುಮೂಲೆ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಮಹಮ್ಮದ್ ದರುವೇಶ್ (19) ಎಂದು ಹೆಸರಿಸಲಾಗಿದೆ. 

ಇವರು ವಿಟ್ಲದಲ್ಲಿರುವ ಎಮಿನೆಂಟ್ ಎಜುಕೇಶನ್ ಇನ್ಸಿಟ್ಯೂಟಿನಲ್ಲಿ ದ್ವೀತಿಯ ಪಿಯುಸಿ ಕಾಮರ್ಸ್ ವಿದ್ಯಾಬ್ಯಾಸ ಮಾಡಿಕೊಂಡಿದ್ದು, ಮೇ 5 ರಂದು ಬಿ ಸಿ ರೋಡಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಕಬಕಕ್ಕೆ ಬಸ್ಸಿನಲ್ಲಿ ಬಂದು ಕಬಕದಲ್ಲಿ ಇಳಿದು ಕಬಕದಿಂದ ವಿಟ್ಲ ಕಡೆಗೆ ಹೋಗುವ ರಸ್ತೆಯಲ್ಲಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಳ ಗ್ರಾಮದ ಬಗ್ಗುಮೂಲೆ ಎಂಬಲ್ಲಿಗೆ ತಲುಪಿದಾಗ ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎ19 ಎಂಆರ್0254 ನೋಂದಣಿ ಸಂಖ್ಯೆಯ ಮಾರುತಿ ಸುಜುಕಿ ಕಂಪೆನಿಯ ಫ್ರಾಂಕ್ಸ್ ಎಂಬ ಹೆಸರಿನ ಗ್ರೇ ಬಣ್ಣದ ಕಾರನ್ನು ಅಡ್ಡಲಾಗಿ ನಿಲ್ಲಿಸಿ, ಕಾರಿನಿಂದ ನೋಡಿ ಪರಿಚಯವಿರುವ ಚೈತ್ರೇಶ್ ಮತ್ತು ಆತನ ಸ್ನೇಹಿತರಾದ ಸನತ್ ಮತ್ತು ಜೀತನ್ ಎಂಬವರು ಕಾರಿನಿಂದ ಇಳಿದಿದ್ದು ಅವರುಗಳ ಪೈಕಿ  ಸನತ್ ಮತ್ತು ಜೀತನ್  ಅವರು ಧರುವೇಶ್ ಅವರ ಬಳಿ ಬಂದು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ಕೆನ್ನೆಗೆ ಹಾಗೂ ಬೆನ್ನಿಗೆ ಕೈಯಿಂದ ಹೊಡೆಯುತ್ತಿರುವಾಗ ಅಲ್ಲೆ ಪಕ್ಕದಲ್ಲಿ ನಿಂತಿದ್ದ ಚೈತ್ರೇಶ್ ಬಂದು ಬಿಡಿಸಿದ್ದು ಆ ವೇಳೆ ಆರೋಪಿಗಳು ಚೈತ್ರೇಶನಿಗೂ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಧರುವೇಶ್ ಬೊಬ್ಬೆ ಹಾಕಿದ್ದು, ಬೊಬ್ಬೆ ಕೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಅವರ ತಾಯಿ ಸ್ಥಳಕ್ಕೆ ಬಂದಾಗ ಸನತ್ ಮತ್ತು ಜೀತನ್ ಅವರುಗಳು ಚೈತ್ರೇಶ್ ನನ್ನು ಅಲ್ಲಿಯೇ ಬಿಟ್ಟು ಅವರು ಬಂದಿದ್ದ ಕಾರಿನಲ್ಲಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೆÇಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಗ್ಗುಮೂಲೆ : ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರಿನಲ್ಲಿ ಬಂದ ಇಬ್ಬರಿಂದ ಹಲ್ಲೆ Rating: 5 Reviewed By: karavali Times
Scroll to Top