ಬಂಟ್ವಾಳ, ಮೇ 06, 2026 (ಕರಾವಳಿ ಟೈಮ್ಸ್) : ಉಳಿ ಗ್ರಾಮದ ಬರ್ಕೆಜಾಲು ಎಂಬಲ್ಲಿ ತೋಡಿನ ಬದಿಯ ಸರಕಾರಿ ಜಾಗದಲ್ಲಿ ಅಕ್ರಮ ಮರಳು ದಾಸ್ತಾನು ಇರಿಸಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು 100 ಟನ್ ಮರಳನ್ನು ವಶಪಡಿಸಿಕೊಂಡು ಇಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಎಚ್ ಸಿ ನಂಜುಂಡಯ್ಯ ಅವರು ಸ್ಥಳಕ್ಕೆ ತೆರಳಿದಾಗ ನದಿಯ ಬದಿಯಲ್ಲಿ ಮೂರು ಕಡೆ ಖಾಲಿ ಜಾಗದಲ್ಲಿ ಸುಮಾರು 10 ಟಿಪ್ಪರ್ ನಷ್ಟು ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬಂದಿದೆ. ಸುಮಾರು 30 ಸಾವಿರ ರೂಪಾಯಿ ಮೌಲ್ಯದ 100 ಟನ್ ಮರಳು ಇದ್ದು, ಈ ಮರಳಿನ ದಾಸ್ತಾನು ಇರಿಸಿದ ಬಗ್ಗೆ ಪರಿಸರದಲ್ಲಿ ವಿಚಾರಿಸಿದಾಗ ಇಸ್ಮಾಯಿಲ್ ಬನತ್ ಪಲ್ಕೆ ಮತ್ತು ಲೋಕನಾಥ ಗೌಡ ಮೈರ ಬರ್ಕೆಜಾಲು ಎಂಬವರು ಎಂದು ತಿಳಿದು ಬಂದಿದ್ದು, ಆರೋಪಿಗಳ ವಿರುದ್ದ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment