ಅನಧಿಕೃತ ಜಾನುವಾರು ವಧೆ ಹಾಗೂ ಸಾಗಾಟ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಡೀಸಿ ಸೂಚನೆ - Karavali Times ಅನಧಿಕೃತ ಜಾನುವಾರು ವಧೆ ಹಾಗೂ ಸಾಗಾಟ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಡೀಸಿ ಸೂಚನೆ - Karavali Times

728x90

26 May 2026

ಅನಧಿಕೃತ ಜಾನುವಾರು ವಧೆ ಹಾಗೂ ಸಾಗಾಟ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಡೀಸಿ ಸೂಚನೆ

ಮಂಗಳೂರು, ಮೇ 26, 2026 (ಕರಾವಳಿ ಟೈಮ್ಸ್) : ಅನಧಿಕೃತ ಒಂಟೆ/ ಜಾನುವಾರುಗಳ ವಧೆ, ಸಾಗಾಟ ಹಾಗೂ ಅನಧಿಕೃತ ಮಾಂಸ ಮಾರಾಟವನ್ನು ತಡೆಗಟ್ಟಲು ಸೂಕ್ತ ಕ್ರಮವಹಿಸಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ  ಸೂಚಿಸಿದ್ದಾರೆ.

ಮಂಗಳೂರು ಮಹಾನಗರಪಾಲಿಕೆ ಕಚೇರಿ ಸಭಾಂಗಣದಲ್ಲಿ ಮೇ 26 ರಂದು ನಡೆದ ಬಕ್ರಿದ್ ಹಬ್ಬ ಆಚರಣೆ ಸಂದರ್ಭದಲ್ಲಿ ಅನಧಿಕೃತ ಜಾನುವಾರುಗಳ ವಧೆ ಹಾಗೂ ಜಾನುವಾರು ಸಾಗಾಣಿಕೆಯನ್ನು ತಡೆಗಟ್ಟುವ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನುವಾರು ಸಾಗಾಣಿಕೆ ಸಮಯದಲ್ಲಿ ಪರವಾನಗಿಯನ್ನು ಕಡ್ಡಾಯವಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಪಡೆಯಬೇಕು. ಅನಧಿಕೃತ ಜಾನುವಾರು ಸಾಗಾಣಿಕೆಯನ್ನು ತಡೆಗಟ್ಟಲು ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಜಾನುವಾರು ಸಾಗಾಟ ವಾಹನಗಳ ಮೇಲೆ ನಿಗಾ ವಹಿಸಬೇಕು. ಜಾನುವಾರು ಸಾಗಾಣಿಕೆ ಮಾಡುವಾಗ ಅಧಿಕೃತ ದಾಖಲೆಗಳಾದ ಪರವಾನಿಗೆ, ಜಾನುವಾರು ಮಾಲೀಕರ ವಿವರಗಳು, ಕೊಂಡುಕೊಳ್ಳುವ ಮಾಲೀಕರ ವಿವರ, ವಾಹನ ದಾಖಲಾತಿ, ಚಾಲಕರ ವಿವರ ಸೇರಿದಂತೆ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಈ ದಾಖಲಾತಿಗಳನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವಂತೆ ಅವರು ಹೇಳಿದರು.

ಯಾವುದೇ ಕಟ್ಟಡಗಳಲ್ಲಿ ಅನಧಿಕೃತ ಪ್ರಾಣಿ ವಧೆ ಕಂಡುಬಂದಲ್ಲಿ ಅಂತಹ ಕಟ್ಟಡಗಳನ್ನು ನಿಯಮಾನುಸಾರ ಮುಟ್ಟುಗೋಲು ಹಾಕಬೇಕು. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವುದು ಮತ್ತು ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಈ ನಿಟ್ಟಿನಲ್ಲಿ ಸಮಿತಿ ಸದಸ್ಯರು ಕ್ರಮ ವಹಿಸಬೇಕು. ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಡೀಸಿ ಹೇಳಿದರು.

ಸಭೆಯಲ್ಲಿ ಮುಖ್ಯ ಪಶುಸಂಗೋಪನಾ ಅಧಿಕಾರಿ ಡಾ. ಅಶೋಕ್ ಕೆ.ಆರ್, ಎಎಸ್ಪಿ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅನಧಿಕೃತ ಜಾನುವಾರು ವಧೆ ಹಾಗೂ ಸಾಗಾಟ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಡೀಸಿ ಸೂಚನೆ Rating: 5 Reviewed By: karavali Times
Scroll to Top