ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ಕಾವೂರು ಪೊಲೀಸರು : ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸಹಿತ ಆರೋಪಿ ವಶಕ್ಕೆ - Karavali Times ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ಕಾವೂರು ಪೊಲೀಸರು : ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸಹಿತ ಆರೋಪಿ ವಶಕ್ಕೆ - Karavali Times

728x90

14 May 2026

ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ಕಾವೂರು ಪೊಲೀಸರು : ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸಹಿತ ಆರೋಪಿ ವಶಕ್ಕೆ

ಮಂಗಳೂರು, ಮೇ 14, 2026 (ಕರಾವಳಿ ಟೈಮ್ಸ್) : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಕಾವುರು ಪೊಲೀಸರು ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಕಾವೂರು ಮೇರಿಹಿಲ್ ಹೆಲಿಪ್ಯಾಡ್ ಮೈದಾನದ ಬಳಿ ಮೆ 13 ರಂದು ನಡೆದಿದೆ. 

ಬಂಧಿತ ಆರೋಪಿಯನ್ನು ಉಳ್ಳಾಲ-ಮುಕ್ಕಚ್ಚೇರಿ ಹಿಲರಿಯ ನಗರ ನಿವಾಸಿ ದಿವಂಗತ ಕೆ ಕೆ ಇಕ್ಬಾಲ್ ಎಂಬವರ ಮಗ ಇರ್ಶಾದ್ ಅಲಿಯಾಸ್ ಇರ್ಷಾ (26) ಎಂದು ಹೆಸರಿಸಲಾಗಿದೆ. ಮೇ 13 ರಂದು ಕಾವೂರು ಠಾಣಾ ವ್ಯಾಪ್ತಿಯ ಮೇರಿಹಿಲ್ ಹೆಲಿಪ್ಯಾಡ್ ಮೈದಾನದ ಬಳಿ ಮೇರಿಹಿಲ್ ಕಡೆಗೆ ಹೋಗುವ ರಸ್ತೆಯ ಎಡ ಬದಿಯಲ್ಲಿ  ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆತನ ಬಳಿ ಇದ್ದ ಸುಮಾರು 3 ಕೆಜಿ 138 ಗ್ರಾಂ ತೂಕದ ಗಾಂಜಾ ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೆÇೀನ್, ಸ್ಕೂಟರ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಈ ಬಗ್ಗೆ ಕವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ದ ಈ ಹಿಂದೆಯೂ ಉಳ್ಳಾಲ ಹಾಗೂ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಗಾಂಜಾ ಸಾಗಾಟ ಪ್ರಕರಣ ಬೇಧಿಸಿದ ಕಾವೂರು ಪೊಲೀಸರು : ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸಹಿತ ಆರೋಪಿ ವಶಕ್ಕೆ Rating: 5 Reviewed By: karavali Times
Scroll to Top