ಬಂಟ್ವಾಳ, ಮೇ 21, 2026 (ಕರಾವಳಿ ಟೈಮ್ಸ್) : ಕರ್ನಾಟಕ ಸರ್ಕಾರದ ನೂತನ ಕುಂಭ ನಿಗಮದ ಅಧ್ಯಕ್ಷ ಡಾ ವೇಲು ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸದ ಅಂಗವಾಗಿ ಗುರುವಾರ ಬಂಟ್ವಾಳದ ಪಣೋಲಿಬೈಲು ಕ್ಷೇತ್ರಕ್ಕೆ ಭೇಟಿ ನೀಡಿದರು. ಬಳಿಕ ಪಣೋಲಿಬೈಲು ಕ್ಷೇತ್ರದ ಭಂಡಾರದ ಮನೆಯಲ್ಲಿ ಕುಲಾಲ ಸಮಾಜ ಬಾಂಧವರ ವತಿಯಿಂದ ಅವರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ವೇಲು ಅವರು, ಕುಲಾಲ ಸಮುದಾಯದ ಸಂಘಟನೆ ಮತ್ತು ಸಾಮಾಜಿಕ ಚಟುವಟಿಕೆಗಳು ಮತ್ತಷ್ಟು ಬಲಿಷ್ಠವಾಗಬೇಕಿದ್ದು, ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವವೇದಿಕೆ ಸ್ಥಾಪಕಾಧ್ಯಕ್ಷ ಡಾ ಅಣ್ಣಯ್ಯ ಕುಲಾಲ್ ಉಳ್ತೂರು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಪಂಜಿಕಲ್ಲು, ಕುಲಾಲ ಕುಂಬಾರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಲಯನ್ ಅನಿಲ್ ದಾಸ್, ಮಾಣಿಲ ಕ್ಷೇತ್ರ ಟ್ರಸ್ಟಿ ಚಂದ್ರಶೇಖರ, ಜಿಲ್ಲಾ ಕೋಳಿ ವಿವಿದೊದ್ದೇಶ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಅಡ್ಯಾರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರು, ಭಂಡಾರದ ಮನೆಯ ನವೀನ್ ಕುಲಾಲ್, ರಮೇಶ್ ಕುಲಾಲ್, ಶಿವಾನಂದ ಕುಲಾಲ್, ಮಾದ್ಯಮ ಪ್ರತಿನಿಧಿ ಜಯಂತ್ ಸಂಕೋಲಿಗೆ, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ಬಿ ರಮೇಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು, ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಮಾಜಿ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್, ಹಿರಿಯ ನಾಗರಿಕ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ಮಾಸ್ಟರ್, ಕುಲಾಲ ಯುವ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಬಂಟ್ವಾಳ ಕುಲಾಲ ಯುವ ವೇದಿಕೆ ಅಧ್ಯಕ್ಷ ಸುಮಿತ್ ಸೊರ್ನಾಡ್, ಮಹಿಳಾ ಮಾಜಿ ಅಧ್ಯಕ್ಷೆ ಭಾರತಿ ಸೇಸಪ್ಪ ಸಹಿತ ಕುಲಾಲ ಸಮಾಜದ ಮುಖಂಡರು ಹಾಗೂ ಬಾಂಧವರು ಉಪಸ್ಥಿತರಿದ್ದರು.











0 comments:
Post a Comment