ಬಂಟ್ವಾಳ, ಮೇ 24, 2026 (ಕರಾವಳಿ ಟೈಮ್ಸ್) : ಅಡಿಕೆ ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರ ಮೈಮೇಲೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಯ್ಲ ಗ್ರಾಮದ ಮುಳಿಯ ಎಂಬಲ್ಲಿ ಮೇ 23 ರಂದು ಸಂಭವಿಸಿದೆ.
ಮೃತರನ್ನು ಮೋನಪ್ಪ ಶೆಟ್ಟಿಗಾರ್ (66) ಎಂದು ಹೆಸರಿಸಲಾಗಿದೆ. ಇವರು ಮುಳಿಯ ಎಂಬಲ್ಲಿರುವ ಸಿಪ್ರಿಯನ್ ಲೋಬೋ ಅವರ ಮನೆಗೆ ಕೂಲಿ ಕೆಲಸಕ್ಕೆ ಹೋದವರು ಸತ್ತ ಅಡಿಕೆ ಮರವನ್ನು ಕಡಿಯುವ ಉದ್ದೇಶದಿಂದ ಅರ್ಧ ಕಡಿದು ಅದನ್ನು ಹಗ್ಗದಿಂದ ಎಳೆಯುವಾಗ ಅಡಿಕೆ ಮರ ಆಕಸ್ಮಿಕವಾಗಿ ಇವರ ಮೈಮೇಲೆ ಬಿದ್ದಿದೆ. ಘಟನೆಯಿಂದ ತಲೆಗೆ ಗಂಭೀರ ಗಾಯಗೊಂಡ ಮೋನಪ್ಪ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಪುತ್ರಿ ಸ್ವಾತಿ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment