ಬಂಟ್ವಾಳ, ಮೇ 14, 2026 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದಲ್ಲಿ ನಿರಂತರವಾಗಿ ದಿನನಿತ್ಯದ ವಸ್ತುಗಳಿಗೆ ಬೆಲೆ ಏರಿಕೆಯಾಗುತ್ತಿದೆ. ಇದು ಕಾರ್ಮಿಕರ, ರೈತರು, ಬಡವರ, ದಿನಕೂಲಿ ನೌಕರರ ಬದುಕಿನ ಮೇಲೆ ಪ್ರಹಾರವನ್ನೇ ಉಂಟುಮಾಡಿದೆ ಎಂದು ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಹೇಳಿದ್ದಾರೆ.
ಬಡವರ ಬದುಕಿಗೆ ಪೂರಕವಾಗಿ ಬೆಲೆ ಏರಿಕೆ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು. ಭಾವನಾತ್ಮಕ ವಿಷಯಗಳನ್ನು ಹಿಡಿದುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಪರಿಣಾಮ ಇಂದು ಬೆಲೆ ಏರಿಕೆಯಂತಹ ಕಠಿಣ ವಿಷಯಗಳನ್ನು ಚರ್ಚೆಗೆ ಹಾಕುವುದನ್ನು ತಡೆಯಲಾಗುತ್ತಿದೆ. ಜನರ ಬದುಕಿನ ವಿಚಾರದ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಬೆಲೆ ಏರಿಕೆ ನಿಯಂತ್ರಣಕ್ಕೆ ಸರಕಾರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.











0 comments:
Post a Comment