ಮಳೆಗಾಲ ಆರಂಭ : ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ಮಣಿನಾಲ್ಕೂರು, ಕಾರಿಂಜ ದೇವಸ್ಥಾನ ಸಹಿತ ಕೆಲವೆಡೆ ಹಾನಿ - Karavali Times ಮಳೆಗಾಲ ಆರಂಭ : ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ಮಣಿನಾಲ್ಕೂರು, ಕಾರಿಂಜ ದೇವಸ್ಥಾನ ಸಹಿತ ಕೆಲವೆಡೆ ಹಾನಿ - Karavali Times

728x90

16 May 2026

ಮಳೆಗಾಲ ಆರಂಭ : ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ಮಣಿನಾಲ್ಕೂರು, ಕಾರಿಂಜ ದೇವಸ್ಥಾನ ಸಹಿತ ಕೆಲವೆಡೆ ಹಾನಿ

 ಬಂಟ್ವಾಳ, ಮೇ 16, 2026 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಶನಿವಾರ ಮಳೆಗಾಲ ಆರಂಭವಾದಂತಹ ವಾತಾವರಣ ಕಂಡು ಬಂದಿದ್ದು, ಬೆಳಿಗ್ಗೆಯಿಂದಲೇ ಹಲವೆಡೆ ಮಳೆ ಆರಂಭವಾಗಿದೆ. ಈ ಮಧ್ಯೆ ಕೆಲವೆಡೆ ಮಳೆ ಹಾಗೂ ಸಿಡಿಲಿಗೆ ಹಾನಿ ಸಂಭವಿಸಿದ ಬಗ್ಗೆಯೂ ವರದಿಯಾಗಿದೆ. 

ಮಣಿನಾಲ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಿಡಿಲು ಹೊಡೆದು ಹಾನಿಯಾಗಿದೆ. ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಶನಿವಾರ ಸಂಜೆ 4.30ರ ವೇಳೆಗೆ ಸಿಡಿಲು ಬಡಿದಿದ್ದು, ದೇವಸ್ಥಾನದ ಗೋಪುರಕ್ಕೆ ಹಾನಿಯಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಡೇಶ್ವಾಲ್ಯ ಗ್ರಾಮದ ಬಾಬು ಬಿನ್ ಅಣ್ಣು ಪೂಜಾರಿ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಳೆಗಾಲ ಆರಂಭ : ಬಂಟ್ವಾಳದಲ್ಲಿ ಸಿಡಿಲಾಘಾತಕ್ಕೆ ಮಣಿನಾಲ್ಕೂರು, ಕಾರಿಂಜ ದೇವಸ್ಥಾನ ಸಹಿತ ಕೆಲವೆಡೆ ಹಾನಿ Rating: 5 Reviewed By: karavali Times
Scroll to Top