ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-9 ಕ್ರಿಕೆಟ್ ಪಂದ್ಯಾಟ : ಬೀಯಿಂಗ್ ಭೂಯಾ ಚಾಂಪಿಯನ್ - Karavali Times ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-9 ಕ್ರಿಕೆಟ್ ಪಂದ್ಯಾಟ : ಬೀಯಿಂಗ್ ಭೂಯಾ ಚಾಂಪಿಯನ್ - Karavali Times

728x90

16 May 2026

ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-9 ಕ್ರಿಕೆಟ್ ಪಂದ್ಯಾಟ : ಬೀಯಿಂಗ್ ಭೂಯಾ ಚಾಂಪಿಯನ್

ಬಂಟ್ವಾಳ, ಮೇ 16, 2026 (ಕರಾವಳಿ ಟೈಮ್ಸ್) : ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ ಪಾಣೆಮಂಗಳೂರು ಇದರ ಆಶ್ರಯದಲ್ಲಿ ಮೇ 10 ರಂದು ಆಲಡ್ಕ ಮೈದಾನದಲ್ಲಿ ನಡೆದ ಇಲಾಟೋ ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-9 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾ ಕೂಟದಲ್ಲಿ ಶರೀಫ್ ಭೂಯಾ ಮಾಲಕತ್ವದ ಬೀಯಿಂಗ್ ಭೂಯಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಸ್ತರ್ ಆಲಡ್ಕ ಮಾಲಕತ್ವದ ಟೀಂ ಆಸ್ಟ್ರಿಕ್ಸ್ ತಂಡ ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. 

ಭೀಯಿಂಗ್ ಭೂಯಾ ತಂಡದ ಜೌಹರ್ ಸರಣಿ ಶ್ರೇಷ್ಠ ಉತ್ತಮ ದಾಂಡುಗಾರ ಪ್ರಶಸ್ತಿ ಪಡೆದುಕೊಂಡರೆ, ಅದೇ ತಂಡದ ಫಾರೂಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಟೀಂ ಆಸ್ಟ್ರಿಕ್ಸ್ ತಂಡದ ಅಬ್ದುಲ್ ರಹಿಮಾನ್ ಚಿಕನ್ ಉತ್ತಮ ದಾಳಿಗಾರ ಪ್ರಶಸ್ತಿ ಪಡೆದುಕೊಂಡರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಫಿದ್ ಬೋಗೋಡಿ, ಅಝರ್ ಆರ್ ಜೆ, ಆಚಿ ಬೋಳಂಗಡಿ, ಸಿದ್ದೀಕ್ ಇಖ್‍ಲಾಸ್, ಅಶ್ರಫ್ ಯು, ಸಿದ್ದೀಕ್ ಪಿಜೆ, ಫೈಝಲ್ ದುಬೈ, ಇರ್ಶಾದ್ ಇಚ್ಚ, ಜಮಾಲ್, ಹನೀಫ್ ಕತಾರ್, ರಾಶಿದ್ ಬೋಗೋಡಿ, ಹನೀಫ್ ಭೂಯಾ, ಹಸನಬ್ಬ, ಝಹೀರ್ ಭೂಯಾ, ಸಲೀಂ ದುಬೈ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ನೌಫಲ್ ಬಂಗ್ಲೆಗುಡ್ಡೆ ಹಾಗೂ ಸದಕತುಲ್ಲಾ ಅವರು ತೀರ್ಪುಗಾರರಾಗಿ ಸಹಕರಿಸಿದರು. 

ಕೂಟದಲ್ಲಿ ಅಬ್ದುಲ್ ರಹಿಮಾನ್ ಮಾಲಕತ್ವದ ಎಸ್ ಎಸ್ ವಾರಿಯರ್ಸ್ ಹಾಗೂ ಸಿದ್ದೀಕ್ ಮಾಲಕತ್ವದ ಎಸ್ ಎಂ ವಾರಿಯರ್ಸ್ ಸಹಿತ ಒಟ್ಟು ನಾಲ್ಕು ತಂಡಗಳು ಭಾಗವಹಿಸಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-9 ಕ್ರಿಕೆಟ್ ಪಂದ್ಯಾಟ : ಬೀಯಿಂಗ್ ಭೂಯಾ ಚಾಂಪಿಯನ್ Rating: 5 Reviewed By: karavali Times
Scroll to Top