ಬಂಟ್ವಾಳ, ಮೇ 31, 2026 (ಕರಾವಳಿ ಟೈಮ್ಸ್) : ಬೋಳಂತೂರು ಗ್ರಾಮದ ದಾಸಮದಕ ಎಂಬಲ್ಲಿನ ನಿವಾಸಿ ಶ್ರೀಮತಿ ಲಲಿತ ಕೋಂ ತಿಮ್ಮಪ್ಪ ರಾಣ್ಯ ಅವರ ಮನೆಗೆ ಮರ ಬಿದ್ದು ಹಾನಿಯಾಗಿರುತ್ತದೆ. ಮಂಚಿ ಗ್ರಾಮದ ಮೊಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನ ಬಳಿಯ ತೆಂಗಿನ ಮರವು ಬಿರುಗಾಳಿಯಿಂದ, ದೇವಸ್ಥಾನದ ಸಭಾಂಗಣ ಮೇಲುಚಾವಡಿ ಮೇಲೆ ಬಿದ್ದಿದ್ದು, ಚಾವಡಿಯು ಹಾನಿಯಾಗಿರುತ್ತದೆ. ಬಾಳ್ತಿಲ ಗ್ರಾಮದ ಕಳ್ಳಪಾಪು ನಿವಾಸಿ ನಾಣ್ಯಪ್ಪ ಪೂಜಾರಿ ಬಿನ್ ಚೆನ್ನಯ ಪೂಜಾರಿ ಅವರ ಕೊಟ್ಟಿಗೆಗೆ ಭಾನುವಾರ ಸಂಜೆ ಸಂಜೆ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಬಾಗಶಃ ಹಾನಿಯಾಗಿರುತ್ತದೆ.
31 May 2026
- Blogger Comments
- Facebook Comments
Subscribe to:
Post Comments (Atom)













0 comments:
Post a Comment