ಪುಣಚ : ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವಿಟ್ಲ ಪೊಲೀಸರ ದಾಳಿ, ಇಬ್ಬರು ವಶಕ್ಕೆ - Karavali Times ಪುಣಚ : ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವಿಟ್ಲ ಪೊಲೀಸರ ದಾಳಿ, ಇಬ್ಬರು ವಶಕ್ಕೆ - Karavali Times

728x90

31 May 2026

ಪುಣಚ : ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವಿಟ್ಲ ಪೊಲೀಸರ ದಾಳಿ, ಇಬ್ಬರು ವಶಕ್ಕೆ

ಬಂಟ್ವಾಳ, ಮೇ 31, 2026 (ಕರಾವಳಿ ಟೈಮ್ಸ್) : ಪುಣಚ ಗ್ರಾಮದ ಪೆರಿಯಾಲ್ತಡ್ಕ ಎಂಬಲ್ಲಿ ಮೇ 30 ರಂದು ರಾತ್ರಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪುಣಚ ಗ್ರಾಮದ ನಿವಾಸಿಗಳಾದ ದಿವಾಕರ ಪೂಜಾರಿ (46) ಹಾಗೂ ಯಶ್ವಂತ್ (34) ಎಂದು ಹೆಸರಿಸಲಾಗಿದೆ. 

ವಿಟ್ಲ ಠಾಣಾ ಪಿಎಸ್ಸೈ ರಾಮಕೃಷ್ಣ ಅವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳ ಜೊತೆ ಈ ದಾಳಿ ನಡೆಸಿದ್ದಾರೆ. ಬಂಧಿತರಿಂದ 4 ಅಂಕದ ಕೋಳಿಗಳು, 4,415/- ರೂಪಾಯಿ ನಗದು ಹಣ, ಕೋಳಿ ಬಾಳು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುಣಚ : ಅಕ್ರಮ ಕೋಳಿ ಅಂಕ ಸ್ಥಳಕ್ಕೆ ವಿಟ್ಲ ಪೊಲೀಸರ ದಾಳಿ, ಇಬ್ಬರು ವಶಕ್ಕೆ Rating: 5 Reviewed By: karavali Times
Scroll to Top