ಬಂಟ್ವಾಳ, ಮೇ 27, 2026 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಜಾನುವಾರು ಸಹಿತ ಗೂಡ್ಸ್ ಟೆಂಪೋ ವಶಪಡಿಸಿಕೊಂಡಿದ್ದು, ಚಾಲಕ ಪರಾರಿಯಾದ ಘಟನೆ ಕಾಡಬೆಟ್ಟು ಗ್ರಾಮದ ಆಲಂಪುರಿ ಎಂಬಲ್ಲಿ ಮೇ 26 ರಂದು ನಡೆದಿದೆ.
ಮೇ 26 ರಂದು ಮಧ್ಯಾಹ್ನ ಕಾಡಬೆಟ್ಟು ಗ್ರಾಮದ ಆಲಂಪುರಿ ಎಂಬಲ್ಲಿ ಗೂಡ್ಸ್ ಟೆಂಪೆÇೀ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಪಿಎಸ್ಸೈ ರನ್ನ ಗೌಡ ಪಾಟೀಲ್ ಅವರು ಪತ್ತೆ ಹಚ್ಚಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಟೆಂಪೆÇೀ ಚಾಲಕ ಪರಾರಿಯಾಗಿದ್ದು, ಕೆಎ19 ಎಎಪ್ 2207 ನೋಂದಣಿ ಸಂಖ್ಯೆಯ ಗೂಡ್ಸ್ ವಾಹನ ಹಾಗೂ ಜಾನುವಾರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















0 comments:
Post a Comment