ಬಂಟ್ವಾಳ, ಮೇ 27, 2026 (ಕರಾವಳಿ ಟೈಮ್ಸ್) : ಇಂಟರ್ ಲಾಕ್ ತುಂಬಿದ ಲಾರಿಯೊಂದು ಮನೆಯ ಕಂಪೌಂಡಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಲಾರಿ ಚಾಲಕ ಗಾಯಗೊಂಡಿದ್ದಲ್ಲದೆ ಮನೆ ಮಾಲಿಕಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ತೆಂಕಬೆಳ್ಳೂರು ಗ್ರಾಮದ ಕೊಪ್ಪಲ ಎಂಬಲ್ಲಿ ಮೇ 24 ರಂದು ರಾತ್ರಿ ಸಂಭವಿಸಿದೆ.
ಇಲ್ಲಿನ ನಿವಾಸಿ ಜೆಫ್ರಿ ಫೆರ್ನಾಂಡಿಸ್ (78) ಅವರ ಮನೆಯ ಕಂಪೌಂಡಿಗೆ ಲಾರಿ ನುಗ್ಗಿದೆ. ಮೇ 24 ರಂದು ರಾತ್ರಿ ಸುಮಾರು 11 ಗಂಟೆಗೆ ಬಿ ಸಿ ರೋಡು-ಪೆÇಳಲಿ ರಸ್ತೆಯಲ್ಲಿ ಬಿ ಸಿ ರೋಡು ಕಡೆಯಿಂದ ಮುನಿರಾಜ್ ಎಂಬವರು ಚಲಾಯಿಸಿಕೊಂಡು ಬಂದ ಕೆಎ51 ಎಎಫ್ 7766 ನೋಂದಣಿ ಸಂಖ್ಯೆಯ ಗೂಡ್ಸ್ ಲಾರಿ ಚಾಲಕನ ನಿಯಂತ್ರಣ ಮೀರಿ ಜೆಫ್ರಿ ಫೆರ್ನಾಂಡಿಸ್ ಅವರ ಮನೆಯ ಕಂಪೌಂಡಿಗೆ ಡಿಕ್ಕಿ ಹೊಡೆದು ಲಾರಿ ಮುಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಇಂಟರ್ ಲಾಕ್ ಸಿಮೆಂಟ್ ಇಟ್ಟಿಗೆಗಳು ಮನೆಯ ಛಾವಣಿ ಹಾಗೂ ಅಂಗಳಕ್ಕೆ ಬಿದ್ದು ಮನೆಯ ಗೋಡೆ, ಕಿಟಕಿ, ಬಾಗಿಲುಗಳು, ಕಂಪೌಂಡ್ ವಾಲ್, ಕಬ್ಬಿಣದ ಗೇಟ್, ಲೈಟ್ ಪೆÇೀಲ್, ಮನೆಯ ಮರದ ಪಕ್ಕಾಸು, ಹಂಚು, ಡಿಟಿಎಚ್ ಆಂಟೆನಾ, ನೀರಿನ ಪೈಪ್, ಅಡುಗೆ ಕೋಣೆಯ ಶೀಟುಗಳಿಗೆ ಹಾನಿ ಸಂಭವಿಸಿದೆ.
ಘಟನೆಯಿಂದ ಒಟ್ಟು 2.50 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಪಘಾತಕ್ಕೀಡಾದ ಲಾರಿ ಜಖಂಗೊಂಡಿದೆ. ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳು ಲಾರಿ ಚಾಲಕ ಮುನಿರಾಜು ಅವರನ್ನು ಕಂಕನಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















0 comments:
Post a Comment