ಬಂಟ್ವಾಳ, ಜೂನ್ 27, 2026 (ಕರಾವಳಿ ಟೈಮ್ಸ್) : ಅಕ್ರಮ ಮದ್ಯ ಮಾರಾಟ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಆರೋಪಿ ಬಂಧಿಸಿದ ಘಟನೆ ವಿಟ್ಲ-ಮಂಗಿಲಪದವು ಎಂಬಲ್ಲಿ ಜೂನ್ 26 ರಂದು ರಾತ್ರಿ ನಡೆದಿದೆ.
ಬಂಧಿತ ಆರೋಪಿಯನ್ನು ವಿಟ್ಲ ಕಸಬಾ ಗ್ರಾಮದ ನಿವಾಸಿ ಲಕ್ಷ್ಮಣ ಗೌ (54) ಎಂದು ಹೆಸರಿಸಲಾಗಿದೆ. ಬಂಧಿತನಿಂದ 4.5 ಲೀಟರ್ ಮದ್ಯ ಹಾಗೂ ಮಾರಾಟದಿಂದ ಸಂಗ್ರಹವಾದ 300 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂನ್ 26 ರಂದು ರಾತ್ರಿ ವೇಳೆ ವಿಟ್ಲ ಪೆÇಲೀಸ್ ಠಾಣಾ ಪೆÇಲೀಸ್ ಇನ್ಸ್ ಪೆಕ್ಟರ್ ಪ್ರಕಾಶ ದೇವಾಡಿಗ ಅವರಿಗೆ ವಿಟ್ಲ ಮಂಗಿಲಪದವು ಬಸ್ ತಂಗುದಾಣದ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಆತನನ್ನು ವಿಚಾರಿಸಿದಾಗ ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ ಮದ್ಯವನ್ನು ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ತನ್ನ ಸ್ವಾಧೀನದಲ್ಲಿರಿಸಿಕೊಂಡಿರುವುದಾಗಿ ದೃಢಪಟ್ಟಿರುವ ಹಿನ್ನಲೆಯಲ್ಲಿ ಆತನ ವಿರುದ್ದ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.















0 comments:
Post a Comment