ಪುತ್ತೂರು, ಜೂನ್ 27, 2026 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆ ಹಚ್ಚಿದ ಪುತ್ತೂರು ಗ್ರಾಮಾಂತರ ಪೊಲೀಸರು ಜಾನುವಾರು, ಪಿಕಪ್ ವಾಹನ ಸಹಿತ ಇಬ್ಬರನ್ನು ಬಂಧಿಸಿದ ಘಟನೆ ಆರ್ಯಾಪು ಗ್ರಾಮದ ಮರಕ್ಕ ಎಂಬಲ್ಲಿ ಜೂನ್ 25 ರಂದು ಸಂಜೆ ನಡೆದಿದೆ.
ಆರೋಪಿಗಳನ್ನು ನಾರಾಯಣ ಹಾಗೂ ಮೊಯ್ದು ಕುಂಞÂ ಎಂದು ಹೆಸರಿಸಲಾಗಿದೆ. ಜೂನ್ 25 ರಂದು ಸಂಜೆ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ಸೈ ಸುಷ್ಮಾ ಜಿ ಭಂಡಾರಿ ಅವರಿಗೆ ಅಕ್ರಮ ಗೋಸಾಗಾಟದ ಬಗ್ಗೆ ಬಂದ ಮಾಹಿತಿ ಮೇರೆಗೆ, ಸಿಬ್ಬಂದಿಗಳೊಂದಿಗೆ ಆರ್ಯಾಪು ಗ್ರಾಮದ ಮರಕ್ಕ ಎಂಬಲ್ಲಿ ಕೆಎ 21 5450 ನೊಂದಣಿ ಸಂಖ್ಯೆಯ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಒಂದು ಜಾನುವಾರನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ವಾಹನದ ಚಾಲಕ ನಾರಾಯಣ ಹಾಗೂ ಇನ್ನೋರ್ವ ಸಹ ಪ್ರಯಾಣಿಕ ಮೊಯ್ದು ಕುಂಞ ಅವರಲ್ಲಿ ವಿಚಾರಿಸಿದಾಗ ಯಾವುದೇ ಪೂರ್ವಾನುಮತಿ ಹಾಗೂ ಅಗತ್ಯ ದಾಖಲಾತಿಗಳು ಇಲ್ಲದಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಜಾನುವಾರು ಸಹಿತ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.















0 comments:
Post a Comment