ಬಜಾಲ್ ಪರಿಸರಕ್ಕೆ ರಾತ್ರಿ 8 ಗಂಟೆ ನಂತರ ಬಸ್ಸು ಓಡಿಸುವಂತೆ ಸಿಪಿಐಎಂಎಲ್ ಡೀಸಿಗೆ ಮನವಿ - Karavali Times ಬಜಾಲ್ ಪರಿಸರಕ್ಕೆ ರಾತ್ರಿ 8 ಗಂಟೆ ನಂತರ ಬಸ್ಸು ಓಡಿಸುವಂತೆ ಸಿಪಿಐಎಂಎಲ್ ಡೀಸಿಗೆ ಮನವಿ - Karavali Times

728x90

9 June 2026

ಬಜಾಲ್ ಪರಿಸರಕ್ಕೆ ರಾತ್ರಿ 8 ಗಂಟೆ ನಂತರ ಬಸ್ಸು ಓಡಿಸುವಂತೆ ಸಿಪಿಐಎಂಎಲ್ ಡೀಸಿಗೆ ಮನವಿ

ಮಂಗಳೂರು, ಜೂನ್ 09, 2026 (ಕರಾವಳಿ ಟೈಮ್ಸ್) : ಮಂಗಳೂರಿನಿಂದ ಬಜಾಲ್ ಪರಿಸರಕ್ಕೆ 23 ನಂಬರಿನ ಬಸ್ ಫೈಸಲ್ ನಗರ ಮತ್ತು 11 ಬಿ ನಂಬರಿನ ಬಸ್ ಜಲ್ಲಿಗುಡ್ಡೆ  ಮತ್ತು 9 ನಂಬರಿನ ಬಸ್ ಬಜಾಲ್ ಚರ್ಚ್‍ಗೆ ಹೋಗುವಂತಹ ಬಸ್ಸುಗಳಿಗೆ ಹಿಂದೆ ಆರ್.ಟಿ.ಎ. ಮೀಟಿಂಗ್‍ನಲ್ಲಿ ನಿಗದಿತ ಸಮಯವನ್ನು  ಕೊಟ್ಟಿರುತ್ತಾರೆ. ಆದರೆ ಇತ್ತೀಚೆಗೆ ಈ 3 ಕಡೆ ಹೋಗುವಂತಹ ಬಸ್ಸುಗಳು ಮಂಗಳೂರಿನಿಂದ ರಾತ್ರಿ 8 ಗಂಟೆಯ ನಂತರ ಬರುತ್ತಿಲ್ಲ. ಮಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಟ್ಟೆ ವ್ಯಾಪಾರಿಗಳು ಹಾಗೂ ವಿವಿಧ ಕೆಲಸ ಮಾಡುವ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ.

ಈ ಬಗ್ಗೆ ಬಸ್ಸು ಮಾಲಕರಲ್ಲಿ ಪ್ರಶ್ನಿಸಿದರೆ “ಕಲೆಕ್ಷನ್ ಬರುತ್ತಿಲ್ಲ” ಎಂಬ ಉತ್ತರ ಬರುತ್ತಿದೆ. ಆದರೆ ಇದು ಜನರ ಸೇವೆಗೆ ವಿರುದ್ದವಾಗಿದೆ. ಮಂಗಳೂರಿನಿಂದ ರಾತ್ರಿ 10.20ಕ್ಕೆ ಇದ್ದ ಬಸ್ಸುಗಳು ಈಗ ರಾತ್ರಿ 8 ಗಂಟೆಯ ನಂತರ ಇಲ್ಲ. ಮುಂಚೆ ಇದ್ದ ಸಮಯದಲ್ಲಿ ಅಥವಾ ಬೇರೆ ಸಮಯದಲ್ಲಿ ನಮ್ಮ ಊರಿಗೆ ಬಸ್ಸುಗಳು ರಾತ್ರಿ 8 ಗಂಟೆಯ ನಂತರ ಬರುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಂತಹ ಬಸ್ಸುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅಥವಾ ಈ ಭಾಗಕ್ಕೆ  ಸರ್ಕಾರಿ ಬಸ್ಸನ್ನು ಕಾರ್ಯಾಚರಿಸಬೇಕು. ಬಜಾಲ್ ಪರಿಸರದ ಸಾರ್ವಜನಿಕರ ಬವಣೆಯನ್ನು ನೀಗಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ ವಾದಿ, ಲೆನಿನ್ ವಾದಿ) ಲಿಬರೇಶನ್ ದ ಕ ಜಿಲ್ಲಾ  ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ ಇ, ಜಿಲ್ಲಾ ಸಮಿತಿ ಸದಸ್ಯ ಅನ್ಸಾರ್ ಬಜಾಲ್, ಕಾರ್ಮಿಕ ಮುಖಂಡ ಮಹಮ್ಮದ್ ಮುಸ್ತಾಪಾ ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಜಾಲ್ ಪರಿಸರಕ್ಕೆ ರಾತ್ರಿ 8 ಗಂಟೆ ನಂತರ ಬಸ್ಸು ಓಡಿಸುವಂತೆ ಸಿಪಿಐಎಂಎಲ್ ಡೀಸಿಗೆ ಮನವಿ Rating: 5 Reviewed By: karavali Times
Scroll to Top