ದೇರಳಕಟ್ಟೆ : ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಇಬ್ಬರು ಕೊಣಾಜೆ ಪೊಲೀಸರ ಬಲೆಗೆ - Karavali Times ದೇರಳಕಟ್ಟೆ : ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಇಬ್ಬರು ಕೊಣಾಜೆ ಪೊಲೀಸರ ಬಲೆಗೆ - Karavali Times

728x90

9 June 2026

ದೇರಳಕಟ್ಟೆ : ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಇಬ್ಬರು ಕೊಣಾಜೆ ಪೊಲೀಸರ ಬಲೆಗೆ

ಮಂಗಳೂರು, ಜೂನ್ 09, 2026 (ಕರಾವಳಿ ಟೈಮ್ಸ್) : ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಹಾಗೂ ಬೆಳ್ಮ ಪ್ಲಾಮಾ ಸಿಟಿಯಾಸ್ ಅಪಾರ್ಟ್ ಮೆಂಟ್ ಬಳಿ ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಜೂನ್ 8 ರಂದು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕು ಇರಾ ಗ್ರಾಮದ ಕುಕ್ಕಾಜೆ ಸೈಟ್ ನಿವಾಸಿ ಮೊಹಮ್ಮದ್ ಅವರ ಪುತ್ರ ಸಿರಾಜುದ್ದೀನ್ (39) ಹಾಗೂ ಕಾಸರಗೋಡು ನಿವಾಸಿ ಎಬಿಎಂ ರಫೀಕ್ ಅವರ ಪುತ್ರ ಹಾತಿಮ್ ಅಬೂಬಕ್ಕರ್ (21) ಎಂದು ಗುರುತಿಸಲಾಗಿದೆ. 

ಇಬ್ಬರನ್ನೂ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿದ್ದು, ಆರೋಪಿಗಳು ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಅವರ ವಿರುದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ದೇರಳಕಟ್ಟೆ : ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಇಬ್ಬರು ಕೊಣಾಜೆ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top