ಸುಳ್ಯ, ಜೂನ್ 02, 2026 (ಕರಾವಳಿ ಟೈಮ್ಸ್) : ಸುಳ್ಯ ಗ್ರಾಮದ ಬೋರುಗುಡ್ಡೆ ಎಂಬಲ್ಲಿ ವಾಸವಾಗಿರುವ ತಂದೆ-ತಾಯಿಯೊಂದಿಗೆ ವಾಸವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಬಾಲಕನೋರ್ವ ಕಾಣೆಯಾದ ಘಟನೆ ಮೇ 30 ರಂದು ನಡೆದಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಬಾಲಕನನ್ನು ಸೈಯದ್ ಆಲಿ ಸೈಯದ್ ಗೌಸ (16) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಬಾಲಕನ ತಾಯಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಸಲ್ಮಾ (40) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಪ್ರಸ್ತುತ ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ಎಂಬಲ್ಲಿ ಪತಿ ಹಾಗೂ ಮಗನೊಂದಿಗೆ ವಾಸವಾಗಿದ್ದು, ಮೇ 30 ರಂದು ಬೆಳಿಗ್ಗೆ ಮಗ ಸೈಯದ್ ಆಲಿ ಸೈಯದ್ ಗೌಸ (16) ಎಂಬಾತನಿಗೆ, ಮೊಬೈಲ್ ನೋಡುತ್ತಿರುವ ವಿಚಾರದಲ್ಲಿ ಬೈದು ಬುದ್ದಿಮಾತು ಹೇಳಿದ್ದರು, ಸ್ವಲ್ಪ ಹೊತ್ತಿನ ಬಳಿಕ ಮಗ ಮನೆಯಿಂದ ಹೊರ ಹೋಗಿರುತ್ತಾನೆ. ಆತನು ಮರಳಿ ಮನೆಗೆ ಹಿಂತಿರುಗದಿದ್ದು, ಆತನ ಗೆಳೆಯರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಎಂದು ನೀಡಿದ ದೂರಿನಂತೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment