ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಶಾಲಾ ಪ್ರಾರಂಭೋತ್ಸವ - Karavali Times ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಶಾಲಾ ಪ್ರಾರಂಭೋತ್ಸವ - Karavali Times

728x90

1 June 2026

ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಶಾಲಾ ಪ್ರಾರಂಭೋತ್ಸವ

ಬಂಟ್ವಾಳ, ಜೂನ್ 01, 2026 (ಕರಾವಳಿ ಟೈಮ್ಸ್) : ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಜೂನ್ 1 ರಂದು ವಿಜೃಂಭಣೆಯಿಂದ ನೆರವೇರಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮಧುಸೂಧನ್ ಐತಾಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿ ತೋಟಗಾರಿಕೆ ಇಲಾಖಾ ಜಂಟಿ ನಿರ್ದೇಶಕ ಐ ಕೆ ದೊಡ್ಡಮಣಿ ಮಂಗಳೂರು, ಗೋಳ್ತಮಜಲು ಗ್ರಾ ಪಂ ಪಿಡಿಒ ಸುನಿಲ್, ಶಾಲಾ ಹಿರಿಯ ವಿದ್ಯಾರ್ಥಿ ಕೆ ಪದ್ಮನಾಭ ರೈ ಕಲ್ಲಡ್ಕ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಚಂದನ್ ಜೈನ್, ಸದಸ್ಯರುಗಳಾದ ಸುರೇಶ್ ನಾಯ್ಕ್,  ಹಮೀದ್ ಅಲಿ, ನವೀನ್, ನಝೀರ್, ಮಾಲಿನಿ, ಸುರೇಶ್ ಪೂಜಾರಿ, ಶಾಲಾ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಮೊದಲಾದವರು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ವೈಭವದ ಮೆರವಣಿಗೆ ನಡೆಯಿತು. ಬಳಿಕ ಮೆಗಾ ಪೋಷಕರ ಸಭೆ ನಡೆಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ, ಹೋಟೆಲ್ ಲಕ್ಷ್ಮಿ ನಿವಾಸ (ಕೆಟಿ ಹೋಟೆಲ್) ಮಾಲಕ ಶಿವರಾಮ ಹೊಳ್ಳ ಅವರ ವತಿಯಿಂದ ಶಾಲೆಯ ಸುಮಾರು ಒಂದು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ ಸರಕಾರಿ ಶಾಲೆಯಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಶಾಲಾ ಪ್ರಾರಂಭೋತ್ಸವ Rating: 5 Reviewed By: karavali Times
Scroll to Top