ಸೋಶಿಯಲ್ ಮೀಡಿಯಾದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪೋಸ್ಟ್ : ಬೆಂಗಳೂರು ಮೂಲದ ಆರೋಪಿ ವಿಟ್ಲ ಪೊಲೀಸರ ಖೆಡ್ಡಾಕ್ಕೆ - Karavali Times ಸೋಶಿಯಲ್ ಮೀಡಿಯಾದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪೋಸ್ಟ್ : ಬೆಂಗಳೂರು ಮೂಲದ ಆರೋಪಿ ವಿಟ್ಲ ಪೊಲೀಸರ ಖೆಡ್ಡಾಕ್ಕೆ - Karavali Times

728x90

28 June 2026

ಸೋಶಿಯಲ್ ಮೀಡಿಯಾದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪೋಸ್ಟ್ : ಬೆಂಗಳೂರು ಮೂಲದ ಆರೋಪಿ ವಿಟ್ಲ ಪೊಲೀಸರ ಖೆಡ್ಡಾಕ್ಕೆ

 ಬಂಟ್ವಾಳ, ಜೂನ್ 28, 2026 (ಕರಾವಳಿ ಟೈಮ್ಸ್) : ಸಾಮಾಜಿಕ ಜಾಲತಾಣ (ಫೇಸ್ ಬುಕ್) ದಲ್ಲಿ ಪ್ರಸಾರವಾಗಿದ್ದ ಪೆÇೀಸ್ಟ್ ಒಂದಕ್ಕೆ, ‘ಸನಾತನಿ ಸಿಂಹ’ ಎಂಬ ಪೇಸ್ ಬುಕ್ ಪೇಜ್ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆಯಾಗುವಂತಹ ಆಕ್ಷೇಪಾರ್ಹ ಕಮೆಂಟ್ ಮಾಡಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ 18 ರಂದು ಪ್ರಕರಣ ದಾಖಲಿಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ವಿಟ್ಲ ಠಾಣಾ ಪೆÇಲೀಸರು ಆರೋಪಿ ಬೆಂಗಳೂರು ವಿದ್ಯಮಾನ್ಯ ನಗರ ನಿವಾಸಿ ಆನಂದ ಎ ಎಂಬಾತನನ್ನು ಜೂನ್ 27 ರಂದು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

ಆರೋಪಿಯ ವಿರುದ್ದ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸೋಶಿಯಲ್ ಮೀಡಿಯಾದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪೋಸ್ಟ್ : ಬೆಂಗಳೂರು ಮೂಲದ ಆರೋಪಿ ವಿಟ್ಲ ಪೊಲೀಸರ ಖೆಡ್ಡಾಕ್ಕೆ Rating: 5 Reviewed By: karavali Times
Scroll to Top