ಬಂಟ್ವಾಳ, ಜೂನ್ 29, 2026 (ಕರಾವಳಿ ಟೈಮ್ಸ್) : ನಾವು ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ನೂತನ ವೆಬ್ ಸೈಟ್ ಲೋಕಾರ್ಪಣೆಗೊಳಿಸುತ್ತಿರುವುದು ಸಂತೋಷದ ವಿಷಯ ಎಂದು ತುಂಬೆ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ ಅಬ್ದುಲ್ ಸಲಾಂ ಹೇಳಿದರು.
ತುಂಬೆ ಪದವಿಪೂರ್ವ ಕಾಲೇಜು ಹಿರಿಯ ವಿದ್ಯಾರ್ಥಿ ಮಹಮ್ಮದ್ ಸ್ವಫೀರ್ ಅವರ ತಾಂತ್ರಿಕ ಪರಿಣತಿಯಿಂದ ನೂತನವಾಗಿ ಉನ್ನತೀಕರಿಸಲ್ಪಟ್ಟ ಕಾಲೇಜಿನ ವೆಬ್ ಸೈಟ್ ಲೋಕಾರ್ಪಣೆಗೊಳಿಸಿ, ತುಂಬೆ ಪ.ದವಿಪೂರ್ವ ಕಾಲೇಜಿನಲ್ಲಿ ಡಾ ಬಿ ಅಹ್ಮದ್ ಹಾಜಿ ಅವರ 93ನೇ ಹುಟ್ಟಿದ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಿಟಿಎ ಅಧ್ಯಕ್ಷ ನಿಸಾರ್ ಅಹಮದ್ ವಳವೂರು ಶುಭ ಹಾರೈಸಿದರು. ಕನ್ನಡ ಉಪನ್ಯಾಸಕ ಅಬ್ದುಲ್ ರಹಮಾನ್ ಡಿ ಬಿ ಅವರು ಡಾ ಅಹಮದ್ ಹಾಜಿ ಮುಹಿಯುದ್ದೀನ್ ಅವರ ಸಂಸ್ಮರಣಾ ಭಾಷಣ ಮಾಡಿದರು.
ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ಇದರ ಟ್ರಸ್ಟಿ ಬಿ ಎಂ ಅಶ್ರಫ್, ಕಾಲೇಜು ನಿವೃತ್ತ ಪ್ರಾಂಶುಪಾಲ ಕೆ ಎನ್ ಗಂಗಾಧರ ಆಳ್ವ, ಬಿ ಎ ಐಟಿಐ ಪ್ರಾಂಶುಪಾಲ ನವೀನ್ ಕುಮಾರ್, ತುಂಬೆ ಕಾಲೇಜು ಪ್ರಾಂಶುಪಾಲ ವಿ ಎಸ್ ಭಟ್, ಉಪ ಪ್ರಾಂಶುಪಾಲ ದಿನೇಶ ಶೆಟ್ಟಿ ಅಳಿಕೆ, ತುಂಬೆ ಆಂಗ್ಲ ಮಾಧ್ಯಮ ಶಾಲಾ ಮುಖ್ಯಸ್ಥೆ ಸೌಮ್ಯ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಮ್ಯಾಕ್ಸಿಂ ಕುವೆಲ್ಲೋ, ಗಫೂರ್, ಚಂಚಲಾಕ್ಷಿ, ಶಾಫಿ ಅಮ್ಮೆಮ್ಮಾರ್, ಶರೀಫ್ ತುಂಬೆ, ನಿಕಟಪೂರ್ವ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆ, ನಿವೃತ್ತ ಬೋಧಕರಾದ ರಾಜ ಎಸ್, ರಘುಪತಿ ಭಟ್, ಶರ್ಮಿಳಾ ಎ, ಜಾನೆಟ್ ಪಸನ್ನ ಮೊದಲಾದವರು ಭಾಗವಹಿಸಿದ್ದರು.
ಸಂಸ್ಥೆಯ ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಸ್ಥೆ ವಿದ್ಯಾ ಕೆ ವಂದಿಸಿ, ಯೋಗೀಶ್ ಬೊಳ್ಳಾರಿ ಮತ್ತು ಅಶೋಕ್ ಸಹಕರಿಸಿದರು. ಇತಿಹಾಸ ಉಪನ್ಯಾಸಕ ಶರತ್ ಆಳ್ವ ಕಾರ್ಯಕ್ರಮ ನಿರೂಪಿಸಿದರಿ.














0 comments:
Post a Comment