ಬೆಂಗಳೂರು, ಜೂನ್ 05, 2026 (ಕರಾವಳಿ ಟೈಮ್ಸ್) : ಡಿ ಕೆ ಶಿವಕುಮಾರ್ ನೇತೃತ್ವದ ನೂತನ ರಾಜ್ಯ ಸರಕಾರದ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಸಿಎಂ ಡಿಕೆ ಶಿವಕುಮಾರ್ ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಗುಪ್ತಚರ, ಸಹಕಾರ, ಸಿಬ್ಬಂದಿ ಆಡಳಿತ ಸುಧಾರಣೆ ಖಾತೆಯನ್ನೂ ತಾವೇ ಇಟ್ಟುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಕಂದಾಯ ಮತ್ತು ಯುವ ಸಬಲೀಕರಣ ಇಲಾಖೆಯ ಜವಾಬ್ದಾರಿ ಕೊಡಲಾಗಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಮಹತ್ವದ ಗೃಹ ಇಲಾಖೆಯ ಜೊತೆಗೆ ಐಟಿ ಬಿಟಿ ಇಲಾಖಾ ಹೊಣೆ ವಹಿಸಲಾಗಿದೆ. ಕರಾವಳಿಯ ಕುವರ ಡಾ ಯು ಟಿ ಖಾದರ್ ಅವರಿಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನೀಡಲಾಗಿದೆ. ಸತೀಶ್ ಜಾರಕಿಹೊಳಿ ಅವರಿಗೆ ಲೋಕೋಪಯೋಗಿ ಇಲಾಖೆ, ಕೆ.ಜೆ. ಜಾರ್ಜ್ ಅವರಿಗೆ ಇಂಧನ ಮತ್ತು ಪ್ರವಾಸೋದ್ಯಮ ಖಾತೆ, ಭೈರತಿ ಸುರೇಶ್ ಅವರಿಗೆ ಸಾರಿಗೆ ಇಲಾಖೆ, ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ನಗರಾಭಿವೃದ್ಧಿ ಖಾತೆ, ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಇಲಾಖೆಯ ಹೊಣೆ ವಹಿಸಲಾಗಿದೆ.
ಕಾಸು, ಗುಪ್ತಚರ, ಸಹಕಾರ, ಸಿಬ್ಬಂದಿ ಆಡಳಿತ ಸುಧಾರಣೆ
* ಡಾ. ಜಿ ಪರಮೇಶ್ವರ – ಉಪಮುಖ್ಯಮಂತ್ರಿ – ಕಂದಾಯ, ಯುವ ಸಬಲೀಕರಣ
* ಕೃಷ್ಣ ಬೈರೇಗೌಡ – ಬೆಂಗಳೂರು ಅಭಿವೃದ್ದಿ
* ಪ್ರಿಯಾಂಕ್ ಖರ್ಗೆ – ಗೃಹ, ಐಟಿಬಿಟಿ
* ಡಾ.ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ದಿ, ಹಿಂದುಳಿದ ಕಲ್ಯಾಣ
* ಯು.ಟಿ ಖಾದರ್ – ಆರೋಗ್ಯ
* ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
* ಎಂ.ಬಿ ಪಾಟೀಲ್ – ಬೃಹತ್ ಕೈಗಾರಿಕೆ
* ಕೆ.ಜೆ ಜಾರ್ಜ್ – ಇಂಧನ, ಪ್ರವಾಸೋದ್ಯಮ
* ಕೆ.ಎಚ್ ಮುನಿಯಪ್ಪ – ಆಹಾರ
* ರಾಮಲಿಂಗಾ ರೆಡ್ಡಿ – ಜಲಸಂಪನ್ಮೂಲ
* ಈಶ್ವರ್ ಖಂಡ್ರೆ – ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ
* ಬೈರತಿ ಸುರೇಶ್ – ಸಾರಿಗೆ
* ಡಾ.ಶರಣ ಪ್ರಕಾಶ್ ಪಾಟೀಲ್ – ವೈದ್ಯಕೀಯ ಶಿಕ್ಷಣ

















0 comments:
Post a Comment