ಬಂಟ್ವಾಳ, ಜೂನ್ 15, 2026 (ಕರಾವಳಿ ಟೈಮ್ಸ್) : ಕೋಳಿ ಅಂಕ ಜೂಜಾಟ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ಸಾಲೆತ್ತೂರು ಗ್ರಾಮದಲ್ಲಿ ಜೂನ್ 14 ರಂದು ಸಂಜೆ ನಡೆದಿದೆ.
ಬಂಧಿತ ಆರೋಪಿಗಳನ್ನು ಉಳ್ಳಾಲ ತಾಲೂಕು, ಬೋಳಿಯಾರು ಗ್ರಾಮದ ನಿವಾಸಿ ಲತೇಶ್ ಕುಮಾರ್ (37), ಬಂಟ್ವಾಳ ತಾಲೂಕು ಮಂಚಿ ಗ್ರಾಮದ ನಿವಾಸಿ ಸುರೇಶ್ ನಾಯ್ಕ್ ಕೆ (63) ಹಾಗೂ ವಿಟ್ಲಪಡ್ನೂರು ಗ್ರಾಮದ ನಿವಾಸಿ ದಯಾನಂದ (40) ಎಂದು ಹೆಸರಿಸಲಾಗಿದೆ.
ಜೂನ್ 14 ರಂದು ಸಂಜೆ ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿರುವ ಬಗ್ಗೆ ವಿಟ್ಲ ಪೆÇಲೀಸ್ ಠಾಣಾ ಪಿಎಸ್ಸೈ ರಾಮಕೃಷ್ಣ ಅವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಕೋಳಿ ಅಂಕ ಜೂಜಾಟ ನಡೆಯುತ್ತಿರುವುದು ಕಂಡುಬಂದಿದೆ.
ಕೃತ್ಯದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಜೂಜಾಟಕ್ಕೆ ಬಳಸುತ್ತಿದ್ದ 1,550/- ರೂಪಾಯಿ ನಗದು ಹಣ, 3 ಅಂಕದ ಕೋಳಿಗಳು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment