ಪೆರುವಾಯಿ : ಇಸ್ಪೀಟ್ ಆಟವಾಡುತ್ತಿದ್ದ ಮನೆಗೆ ವಿಟ್ಲ ಪೊಲೀಸರ ದಾಳಿ, ಮೂವರು ವಶಕ್ಕೆ - Karavali Times ಪೆರುವಾಯಿ : ಇಸ್ಪೀಟ್ ಆಟವಾಡುತ್ತಿದ್ದ ಮನೆಗೆ ವಿಟ್ಲ ಪೊಲೀಸರ ದಾಳಿ, ಮೂವರು ವಶಕ್ಕೆ - Karavali Times

728x90

6 June 2026

ಪೆರುವಾಯಿ : ಇಸ್ಪೀಟ್ ಆಟವಾಡುತ್ತಿದ್ದ ಮನೆಗೆ ವಿಟ್ಲ ಪೊಲೀಸರ ದಾಳಿ, ಮೂವರು ವಶಕ್ಕೆ

ಬಂಟ್ವಾಳ, ಜೂನ್ 06, 2026 (ಕರಾವಳಿ ಟೈಮ್ಸ್) : ಪೆರುವಾಯಿ ಗ್ರಾಮದ ದೆಮೆಚ್ಚಿ ಎಂಬಲ್ಲಿನ ನಿವಾಸಿ ಆಲ್ಬರ್ಟ್ ಎಂಬವರ ಮನೆಯೊಳಗೆ ಅಕ್ರಮ ಇಸ್ಪಿಟ್ ಆಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 

ಬಂಧಿತರನ್ನು ಪೆರುವಾಯಿ ನಿವಾಸಿ ಹಮೀದ್ ಪಿ (49), ಕೇಪು ನಿವಾಸಿ ಹನೀಫ್ (49) ಹಾಗೂ ಮಂಜೇಶ್ವರ ನಿವಾಸಿ ಇಂತಿಯಾಝ್ ಎ (31) ಎಂದು ಹೆಸರಿಸಲಾಗಿದೆ. ಇತರ ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 1980/- ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪೆರುವಾಯಿ : ಇಸ್ಪೀಟ್ ಆಟವಾಡುತ್ತಿದ್ದ ಮನೆಗೆ ವಿಟ್ಲ ಪೊಲೀಸರ ದಾಳಿ, ಮೂವರು ವಶಕ್ಕೆ Rating: 5 Reviewed By: karavali Times
Scroll to Top