ಕುಡಿಯುವ ನೀರನ್ನು ಶುದ್ದೀಕರಿಸಿಯೇ ಸರಬರಾಜು ಮಾಡುತ್ತಿದೆ : ಮಹಾನಗರ ಪಾಲಿಕೆ ಸ್ಪಷ್ಟನೆ - Karavali Times ಕುಡಿಯುವ ನೀರನ್ನು ಶುದ್ದೀಕರಿಸಿಯೇ ಸರಬರಾಜು ಮಾಡುತ್ತಿದೆ : ಮಹಾನಗರ ಪಾಲಿಕೆ ಸ್ಪಷ್ಟನೆ - Karavali Times

728x90

19 June 2026

ಕುಡಿಯುವ ನೀರನ್ನು ಶುದ್ದೀಕರಿಸಿಯೇ ಸರಬರಾಜು ಮಾಡುತ್ತಿದೆ : ಮಹಾನಗರ ಪಾಲಿಕೆ ಸ್ಪಷ್ಟನೆ

ಮಂಗಳೂರು, ಜೂನ್ 19, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ನೀರು ಶುದ್ಧೀಕರಣ ಘಟಕಗಳಲ್ಲಿ ಶುದ್ಧೀಕರಿಸಿ ನಂತರ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಮನೆಗಳಿಗೆ ನೀರಿನ ಸರಬರಾಜು ಮಾಡಲಾಗುತ್ತಿದೆ. ಎಲ್ಲ ವಾಡ್‍ಗಳಲ್ಲಿ ಕಾಲ ಕಾಲಕ್ಕೆ ಕುಡಿಯುವ ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ನೀರಿನ ಗುಣಮಟ್ಟವನ್ನು ಖಾತರಿ ಪಡಿಸಿಕೊಳ್ಳಲಾಗುತ್ತಿದೆ.

ಮಂಗಳೂರು ಮಹಾನಗರಪಾಲಿಕೆಯ ವಾರ್ಡ್ ಸಂಖ್ಯೆ 31ರ ಭಟ್ಟಗುಡ್ಡೆ 5ನೇ ಅಡ್ಡ ರಸ್ತೆ ಪ್ರದೇಶದ ಕೆಲವು ಮನೆಗಳಲ್ಲಿ ಕಾಲುವೆ ನೀರು ಬಾವಿಯ ನೀರಿನೊಂದಿಗೆ ಬೆರೆತಿರುವ ಬಗ್ಗೆ ದೂರುಗಳು ಬಂದಿದ್ದು, ಅದರಂತೆ ಮಹಾನಗರಪಾಲಿಕೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೀರಿನ ಸರಬರಾಜು ಕೊಳವೆಗಳಲ್ಲಿ ಉಂಟಾಗಿದ್ದ ಸೋರಿಕೆಯನ್ನು ಪತ್ತೆಹಚ್ಚಿ ತಕ್ಷಣ ದುರಸ್ತಿಪಡಿಸಿದ್ದಾರೆ. ಹಾಗೂ ಶುದ್ಧೀಕರಿಸಿದ ನೀರಿನ ಎಲ್ಲ ರೀತಿಯ ಪರೀಕ್ಷೆಗಳನ್ನು ಕೈಗೊಂಡು, ಶುದ್ಧೀಕರಿಸಿದ ನಂತರವೇ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಪಾಲಿಕೆಯ ಶುದ್ಧೀಕರಿಸಿದ ನೀರನ್ನು ಎಲ್ಲ ವಾಡ್‍ಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ನೀರಿನ ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220303 ಅನ್ನು ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕುಡಿಯುವ ನೀರನ್ನು ಶುದ್ದೀಕರಿಸಿಯೇ ಸರಬರಾಜು ಮಾಡುತ್ತಿದೆ : ಮಹಾನಗರ ಪಾಲಿಕೆ ಸ್ಪಷ್ಟನೆ Rating: 5 Reviewed By: karavali Times
Scroll to Top