ಮಂಗಳೂರು, ಜೂನ್ 13, 2026 (ಕರಾವಳಿ ಟೈಮ್ಸ್) : ಕೇಂದ್ರ ಸರ್ಕಾರವು, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಂಪರ್ಕ ರಸ್ತೆಗಳ ಸುಧಾರಣೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (ಸಿ ಆರ್ ಐ ಎಫ್) ಅಡಿಯಲ್ಲಿ ಒಟ್ಟು 57 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಮಂಜೂರು ಮಾಡಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಈ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು 14 ಪ್ರಮುಖ ಕಾಮಗಾರಿ ಮೂಲಕ ವಿವಿಧೆಡೆ ಒಟ್ಟು 82.94 ಕಿಲೋ ಮೀಟರ್ ಉದ್ದದ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆ ಈ ಅನುದಾನದ ಮೂಲಕ ಮೇಲ್ದರ್ಜೆಗೇರಿಸಲಾಗುವುದು. ಮಂಗಳೂರು, ಉಳ್ಳಾಲ, ಮೂಡುಬಿದ್ರೆ, ಪುತ್ತೂರು ಬಂಟ್ವಾಳ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿಯೂ ನಿಗದಿತ ರಸ್ತೆಗಳ ಅಭಿವೃದ್ದಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ಉಳ್ಳಾಲ ತಾಲೂಕಿನ ಕಟಪಾಡಿ-ಅಬ್ಬಕ್ಕ ಸರ್ಕಲ್ ರಸ್ತೆಯ ಚಂಬುಗುಡ್ಡೆಯಿಂದ ಮಚಲಿ ಹೋಟೆಲ್ ಹಾಗೂ ಇನ್ಫೋಸಿಸ್ ಸಮೀಪದ ರಸ್ತೆ ಅಭಿವೃದ್ಧಿಗೆ ಒಟ್ಟು 4 ಕೋಟಿ ರೂಪಾಯಿ (2.66 ಕಿ.ಮೀ ಮತ್ತು 1 ಕಿ.ಮೀ) ಹಾಗೂ ಸಜಿಪನಡು-ಬೋಳ್ಯಾರ್ ರಸ್ತೆಯ ಆಯ್ದ ಭಾಗಗಳ ಸುಧಾರಣೆಗೆ 2 ಕೋಟಿ ರೂಪಾಯಿ (2.88 ಕಿ.ಮೀ)
ಮೂಡುಬಿದಿರೆಯ ಹೊಸಂಗಡಿ ಪುಚ್ಚಮೊಗರು ಸೇತುವೆಯಿಂದ ಬೆಳ್ತಂಗಡಿ-ಬಂಟ್ವಾಳ ಕ್ರಾಸ್ ವರೆಗಿನ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ದಿಗೆ (8.90 ಕಿ.ಮೀ) 6 ಕೋಟಿ ರೂಪಾಯಿ.
ಸುರತ್ಕಲ್-ಕಬಕ ರಸ್ತೆಯ ಬಜಪೆಯಿಂದ ಕೈಕಂಬದವರೆಗೆ ಹಾಗೂ ಪೆÇಳಲಿ ದ್ವಾರದಿಂದ ಅಡ್ಡೂರು ಸೇತುವೆಯವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ದಿಗೆ (10.50 ಕಿ.ಮೀ) 6 ಕೋಟಿ ರೂಪಾಯಿ
ಪೂಂಜಾಲಕಟ್ಟೆಯ ಮೂರ್ಜೆ ಕುದ್ಕೋಲಿ ರಸ್ತೆಯ ಪಾಂಗಲ್ಪಾಡಿಯಿಂದ ಕುದ್ಕೋಲಿವರೆಗಿನ ರಾಜ್ಯ ಹೆದ್ದಾರಿ ಅಬಿವೃದ್ದಿಗೆ (10.07 ಕಿ.ಮೀ) 6 ಕೋಟಿ ರೂಪಾಯಿ.
ಉಪ್ಪಿನಂಗಡಿ-ಪೆರಿಯಡ್ಕ-ಕೊಯ್ಲಾ ಸೆಕ್ಷನ್ (2 ಕೋಟಿ - 3 ಕಿ.ಮೀ), ಹಂತ್ಯಾರು-ಬೆಟ್ಟಂಪಾಡಿ ರಸ್ತೆ (3 ಕೋಟಿ ರೂಪಾಯಿ 4.50 ಕಿ.ಮೀ), ಮತ್ತು ಕೆಪುಲು-ಪಾದಿಲ್ ರಸ್ತೆ (1 ಕೋಟಿ ರೂಪಾಯಿ, 0.65 ಕಿ.ಮೀ)
ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯ (ರಾಜ್ಯ ಹೆದ್ದಾರಿ) ಆಯ್ದ ಭಾಗಗಳ ಅಭಿವೃದ್ದಿ (10.10 ಕಿ.ಮೀ) 6 ಕೋಟಿ ರೂಪಾಯಿ.
ವೇಣೂರು-ಅಂಡಿಂಜೆ-ನಾರಾವಿ ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ (10 ಕಿ.ಮೀ) 6 ಕೋಟಿ ರೂಪಾಯಿ
ರಸ್ತೆ ನವೀಕರಣ ಮತ್ತು ಅಗಲೀಕರಣ ಕಾಮಗಾರಿ
ಎಕ್ಸಲೆಂಟ್ ಕಾಲೇಜಿನಿಂದ ಮೂಡಬಿದ್ರೆ ಪೆÇಲೀಸ್ ಸ್ಟೇಷನ್ ರಸ್ತೆಯವರೆಗಿನ ಬೆಳ್ತಂಗಡಿ-ಮೂಡಬಿದಿರೆ-ಮುಲ್ಕಿ ರಾಜ್ಯ ಹೆದ್ದಾರಿ ನವೀಕರಣ (5 ಕಿ.ಮೀ) 5 ಕೋಟಿ ರೂಪಾಯಿ
ಸೋಮಂತಡ್ಕದಿಂದ ಹೆಡ್ಯವರೆಗಿನ (ರಾಷ್ಟ್ರೀಯ ಹೆದ್ದಾರಿ-275 ರಿಂದ 276 ಸಂಪರ್ಕಿಸುವ) ಹೆದ್ದಾರಿ ಅಭಿವೃದ್ಧಿ (5.50 ಕಿ.ಮೀ) 5 ಕೋಟಿ ರೂಪಾಯಿ.
ಬಂಟ್ವಾಳದ ಅನಂತಾಡಿ-ಮಂಗಿಲಪದವು-ಕೊಡಪದವು ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ (3 ಕಿ.ಮೀ) 5 ಕೋಟಿ ರೂಪಾಯಿ.
ಒಟ್ಟಾರೆ ಈ ಯೋಜನೆಯಡಿ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳ ಬಲವರ್ಧನೆ, ಸುಗಮ ಸಂಚಾರ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಬೃಹತ್ ಅನುದಾನವನ್ನು ಮಂಜೂರು ಮಾಡಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಈ ಯೋಜನೆಗೆ ಅನುದಾನ ಮಂಜೂರು ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಸಂಸದರು ಅಭಿನಂದನೆ ಸಲ್ಲಿಸಿದ್ದಾರೆ. ಈ ಪ್ರಮುಖ ರಸ್ತೆಗಳ ಸುಧಾರಣೆ ಕಾಮಗಾರಿ ಪೂರ್ಣಗೊಂಡ ಬಳಿಕ ಜಿಲ್ಲೆಯ ಆರ್ಥಿಕ, ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಸಂಸದ ಕ್ಯಾ ಚೌಟ ತಿಳಿಸಿದ್ದಾರೆ.













0 comments:
Post a Comment