ಬಂಟ್ವಾಳ, ಜೂನ್ 22, 2026 (ಕರಾವಳಿ ಟೈಮ್ಸ್) : ರತನ್ ಕುಮಾರ್ (31) ಎಂಬವರು ಜೂನ್ 3 ರಂದು ಕೊಟ್ಟಿಯೂರು ದೇವಸ್ಥಾನಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟು ಹೋಗಿದ್ದು, ಈವರೆಗೂ ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿರುವ ಇವರು ಮನೆಯಿಂದ ಹೊರಡುವ ವೇಳೆ ಕಪ್ಪು ಪ್ಯಾಂಟ್ ಮತ್ತು ಉದ್ದ ತೋಳಿನ ಆಕಾಶ ನೀಲಿ ಬಣ್ಣದ ಶರ್ಟ್ ಧರಿಸಿದ್ದರು. ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಇರುವಿಕೆ ಬಗ್ಗೆ ಮಾಹಿತಿ ಇದ್ದವರು ಪೂಂಜಾಲಕಟ್ಟೆ ಪೆÇಲೀಸ್ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ.














0 comments:
Post a Comment