ಆರ್.ಟಿ.ಒ. ದಂಡ ಪಾವತಿಗೆ ಶೇಕಡಾ 50 ರಿಯಾಯಿತಿ ಘೋಷಣೆ - Karavali Times ಆರ್.ಟಿ.ಒ. ದಂಡ ಪಾವತಿಗೆ ಶೇಕಡಾ 50 ರಿಯಾಯಿತಿ ಘೋಷಣೆ - Karavali Times

728x90

5 June 2026

ಆರ್.ಟಿ.ಒ. ದಂಡ ಪಾವತಿಗೆ ಶೇಕಡಾ 50 ರಿಯಾಯಿತಿ ಘೋಷಣೆ

ಮಂಗಳೂರು, ಜೂನ್ 05, 2026 (ಕರಾವಳಿ ಟೈಮ್ಸ್) : ಸಾರಿಗೆ ಇಲಾಖೆಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಶೇಕಡಾ 50% ರಷ್ಟು ದಂಡ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ವಾಹನ ಮಾಲೀಕರು ತಮ್ಮ ವಾಹನದ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ದಂಡ ಮೊತ್ತದ ಅರ್ಧದಷ್ಟು ಪಾವತಿ ಮಾಡಬಹುದಾಗಿದೆ. 

1991 ರಿಂದ 2022ರೊಳಗೆ ಪ್ರಾದೇಶಿಕ ಸಾರಿಗೆ ಕಛೇರಿ (ಆರ್.ಟಿ.ಒ.) ಅಧಿಕಾರಿಗಳು ದಾಖಲಿಸಿರುವ ಪ್ರಕರಕಣಗಳು ಮಾತ್ರ ಶೇಕಡಾ 50% ರಷ್ಟು ದಂಡ ಪಾವತಿ ರಿಯಾಯಿತಿ ವ್ಯಾಪ್ತಿಗೆ ಒಳಪಡುತ್ತವೆ. ಮಂಗಳೂರು ಆರ್.ಟಿ.ಓ ಕಛೇರಿಯಲ್ಲಿ ಈ ಅವಧಿಯಲ್ಲಿ 2724 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಸಂಬಂಧಪಟ್ಟ ವಾಹನ ಮಾಲೀಕರು ಜೂನ್ 21 ರಿಂದ ಜುಲೈ 10ರೊಳಗೆ ರಿಯಾಯಿತಿ ಬಳಸಿಕೊಂಡು ದಂಡ ಪಾವತಿಸಿ ಪ್ರಕರಣ ಮುಕ್ತಾಯಗೊಳಿಸಿಕೊಳ್ಳಬಹುದು ಎಂದು ಮಂಗಳೂರು ಉಪಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಆರ್.ಟಿ.ಒ. ದಂಡ ಪಾವತಿಗೆ ಶೇಕಡಾ 50 ರಿಯಾಯಿತಿ ಘೋಷಣೆ Rating: 5 Reviewed By: karavali Times
Scroll to Top