ಪಾಣೆಮಂಗಳೂರು ಶ್ರೀ ಶಾರದಾ ಪ್ರೌಡಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ - Karavali Times ಪಾಣೆಮಂಗಳೂರು ಶ್ರೀ ಶಾರದಾ ಪ್ರೌಡಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ - Karavali Times

728x90

4 June 2026

ಪಾಣೆಮಂಗಳೂರು ಶ್ರೀ ಶಾರದಾ ಪ್ರೌಡಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬಂಟ್ವಾಳ, ಜೂನ್ 05, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5 ರಂದು ಆಚರಿಸಲಾಯಿತು. ಕನ್ನಡ ಭಾಷಾ ಶಿಕ್ಷಕರು ಹಾಗೂ ಎನ್ ಸಿ ಸಿ ಚೀಫ್ ಆಫೀಸರ್ ಧನರಾಜ್ ಡಿ ಆರ್ ಅವರು ಮಕ್ಕಳಿಗೆ ಪರಿಸರದಿಂದಾಗುವ ಅನುಕೂಲಗಳು, ಪರಿಸರದ ಸಂರಕ್ಷಣೆ, ಮಹತ್ವ, ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಪರಿಸರದ ಮೇಲಾಗುವ ದುಷ್ಪರಿಣಾಮಗಳು ಹಾಗೂ ಮುಂದಿನ ಜನಾಂಗಕ್ಕೆ ಪರಿಸರವನ್ನು ಉಳಿಸುವಲ್ಲಿ ನಮ್ಮೆಲ್ಲರ ಪಾತ್ರವೇನು ಎಂಬುದರ ಬಗ್ಗೆ ಮಾಹಿತಿ ನೀಡಿದರು. 

ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ್ ಪರಿಸರ ದಿನಾಚರಣೆಯ ಶುಭಾಶಯ ಕೋರಿದರು. ಶಾಲಾ ಇಕೋ ಕ್ಲಬ್ ಸಂಯೋಜಕಿ ಶ್ರೀಮತಿ ಶೀಲತಾ ಅವರು ಪರಿಸರ ದಿನಾಚರಣೆಯನ್ನು ಶಾಲಾ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಗಿಡ ನೆಡುವುದರ ಮೂಲಕ ನೆರವೇರಿಸಿಕೊಟ್ಟರು. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ಶ್ರೀ ಶಾರದಾ ಪ್ರೌಡಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ Rating: 5 Reviewed By: karavali Times
Scroll to Top