ಸುಳ್ಯ, ಜೂನ್ 20, 2026 (ಕರಾವಳಿ ಟೈಮ್ಸ್) : ಐದು ವರ್ಷದ ಅಪ್ರಾಪ್ತ ಅವಳಿ ಮಕ್ಕಳಿಬ್ಬರು ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಜೂನ್ 20 ರಂದು ಸಂಜೆ ಸಂಭವಿಸಿದೆ.
ಇಲ್ಲಿನ ನಿವಾಸಿ ವಸಂತ (41) ಅವರು ತನ್ನ ಪತ್ನಿ ಹಾಗೂ 5 ವರ್ಷ ಪ್ರಾಯದ ಅವಳಿ ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದು, ಜೂನ್ 20 ರಂದು ಮಧ್ಯಾಹ್ನ ವಸಂತ ಅವರು ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆ ತಂದಿದ್ದು, ಸಂಜೆ ವೇಳೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ವಸಂತ ಹಾಗೂ ಅವರ ಪತ್ನಿ ಮನೆ ಸಮೀಪದ ತೋಟದಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ವಸಂತ ಅವರ ಪತ್ನಿ ಮನೆಗೆ ಬಂದಾಗ ಮಕ್ಕಳು ಮನೆಯಲ್ಲಿ ಕಾಣದಿದ್ದಾಗ ದಂಪತಿ ಸೇರಿ ಸುತ್ತಮುತ್ತ ಪರಿಸರದಲ್ಲಿ ಹುಡುಕಾಡಿದಾಗ ಇಬ್ಬರು ಮಕ್ಕಳ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಮಕ್ಕಳು ಆಟವಾಡುತ್ತಿದ್ದಾಗ ಕೆರೆಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.













0 comments:
Post a Comment