ಕಡಬ, ಜೂನ್ 20, 2026 (ಕರಾವಳಿ ಟೈಮ್ಸ್) : ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪತಿ-ಪತ್ನಿ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಪತ್ತೆಯಾದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಅಲಂಕಾರು ಗ್ರಾಮದ ಕಜೆ ಎಂಬಲ್ಲಿ ಜೂನ್ 20 ರಂದು ಸಂಭವಿಸಿದೆ.
ಮೃತ ದಂಪತಿಯನ್ನು ದಿನೇಶ್ ಹಾಗೂ ಸಂಗೀತಾ (40) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಕಡಬ ಅಲಂಕಾರು ನಿವಾಸಿ ಸುಮಲತಾ (42) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಸಂಬಂಧಿಕರಾದ ದಿನೇಶ್ ಹಾಗೂ ಸಂಗೀತಾ (40) ಎಂಬ ದಂಪತಿಗಳು ಮಗುವಿನೊಂದಿಗೆ ಕಡಬ ಠಾಣಾ ವ್ಯಾಪ್ತಿಯ ಅಲಂಕಾರು ಗ್ರಾಮದ ಕಜೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಜೂನ್ 20 ರಂದು ಬೆಳಿಗ್ಗೆ ಸಂಗೀತಾ ಅವರ ತವರು ಮನೆಯಿಂದ ಸಂಗಿತಾ ಅವರಿಗೆ ದೂರವಾಣಿ ಕರೆ ಮಾಡಿದಾಗ ಪ್ರತಿಕ್ರಿಯೆ ಬಾರದೆ ಇದ್ದ ಹಿನ್ನಲೆಯಲ್ಲಿ ಸಂಗಿತಾ ವಾಸವಿದ್ದ ಮನೆಯ ಬಳಿ ಸುಮಲತಾ ಅವರ ಗಂಡ ತೆರಳಿ ಪರಿಶೀಲಿಸಿದಾಗ ಮನೆ ಬಾಗಿಲು ಒಳಗಿನಿಂದ ಮುಚ್ಚಿತ್ತು. ಮನೆಯ ಬಾಗಿಲು ತೆರೆದು ನೋಡಿದಾಗ ಪತಿ ದಿನೇಶ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮನೆಯೊಳಗೆ ಪತ್ನಿ ಸಂಗೀತಾ ಕೂಡಾ ರಕ್ತದ ಮಡುವಿನಲ್ಲಿ ಬಿದ್ದಿದ್ದು ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಿನೇಶನು ಕೌಟುಂಬಿಕ ಕಲಹದಿಂದ ತನ್ನ ಪತ್ನಿ ಸಂಗೀತಾಳನ್ನು ಯಾವುದೋ ಆಯುಧದಿಂದ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ನೀರಿದ ದೂರಿನ ಮೇರೆಗೆ ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ದಂಪತಿ ಸಾವಿನ ಬಳಿಕ ಇವರ ಎರಡು ವರ್ಷದ ಹೆಣ್ಣು ಮಗು ಮನೆಯೊಳಗೆ ಅತ್ತು ಅತ್ತು ಬಳಿಕ ಅಲ್ಲೇ ನಿದ್ರೆಗೆ ಜಾರಿತ್ತು. ಇದೀಗ ಎಳೆಯ ಮಗು ಅನಾಥವಾಗಿದೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.














0 comments:
Post a Comment