ಖಾತೆ ಹಂಚಿಕೆಯಾದ ತಾಸಿನಲ್ಲೇ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್ - Karavali Times ಖಾತೆ ಹಂಚಿಕೆಯಾದ ತಾಸಿನಲ್ಲೇ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್ - Karavali Times

728x90

4 June 2026

ಖಾತೆ ಹಂಚಿಕೆಯಾದ ತಾಸಿನಲ್ಲೇ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್

ಬೆಂಗಳೂರು, ಜೂನ್ 05, 2026 (ಕರಾವಳಿ ಟೈಮ್ಸ್) : ಖಾತೆ ಹಂಚಿಕೆಯಾದ ತಾಸಿನಲ್ಲೇ ಆರೋಗ್ಯ ಸಚಿವ ಡಾ. ಯು.ಟಿ. ಖಾದರ್ ಅವರು ಗುರುವಾರ ರಾತ್ರಿ ಜಯನಗರದ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಕೊರತೆ ಇರುವುದು ಈ ವೇಳೆ ಗಮನಕ್ಕೆ ಬಂದಿದೆ. ಇರುವ ಸಿಬ್ಬಂದಿ ಪೈಕಿ ಕೆಲವರು ಕೆಲಸಕ್ಕೆ ಗೈರಾಗಿದ್ದರು. ಇದರಿಂದ ಸಿಬ್ಬಂದಿ ಮೇಲೆ ಸಚಿವರು ಗರಂ ಆಗಿದ್ದಾರೆ. 

ಮಾಧ್ಯಮಗಳ ಜೊತೆ ಮಾತಾಡಿದ ಸಚಿವ ಖಾದರ್, ಆಸ್ಪತ್ರೆಯ ನಿಜ ಪರಿಸ್ಥಿತಿ ನೋಡಲು ರಾತ್ರಿ ಸಮಯದಲ್ಲಿ ಬಂದಿದ್ದೇನೆ. ಏನೆಲ್ಲಾ ಲೋಪದೋಷವಿದೆ ಎಂದು ನೋಡಿದ್ದೇನೆ. ಎಲ್ಲಾ ಕಡೆಯೂ ವಿಸಿಟ್ ಮಾಡಿದ್ದೇನೆ. ಇವತ್ತು ಇಬ್ಬರು ವೈದ್ಯರು ಗೈರಾಗಿದ್ದರು. ಅವರಿಗೆ ಎಚ್ಚರಿಕೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡು, ಕೆಲಸ ಮಾಡುವಂತೆ ಸೂಚಿಸುತ್ತೇನೆ. ಸರಕಾರಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚು ಬರುತ್ತಾರೆ. ಎಷ್ಟೇ ಜನ ಬಂದರೂ ವೈದ್ಯರು ನೋಡಬೇಕು ಎಂದರು. 

  • Blogger Comments
  • Facebook Comments

0 comments:

Post a Comment

Item Reviewed: ಖಾತೆ ಹಂಚಿಕೆಯಾದ ತಾಸಿನಲ್ಲೇ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್ Rating: 5 Reviewed By: karavali Times
Scroll to Top