ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಹಣ ನೀಡದೆ ಗೇಟ್ ತುಂಡು ಮಾಡಿ ತೆರಳಿದ ಚಾಲಕ : ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಹಣ ನೀಡದೆ ಗೇಟ್ ತುಂಡು ಮಾಡಿ ತೆರಳಿದ ಚಾಲಕ : ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

27 June 2026

ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಹಣ ನೀಡದೆ ಗೇಟ್ ತುಂಡು ಮಾಡಿ ತೆರಳಿದ ಚಾಲಕ : ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ಜೂನ್ 29, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ವಾಹನ ಚಾಲಕನೋರ್ವ ಹಣ ಪಾವತಿಸದೆ ಗೇಟ್ ತುಂಡರಿಸಿ ಹೋದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಟೋಲ್ ಗೇಟಿನಲ್ಲಿ ಸಹ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುವ, ಸುರತ್ಕಲ್ ನಿವಾಸಿ ಯಶವಂತ ಕುಂದರ್ (49) ಅವರು ಪೊಲೀಸರಿಗೆ ದೂರು ನೀಡಿದ್ದು, ಜೂನ್ 26 ರಂದು ಬೆಳಿಗ್ಗೆ 10.29ಕ್ಕೆ ಬ್ರಹ್ಮರಕೂಟ್ಲು ಟೋಲ್ ಗೇಟಿನ 5ನೇ ಬೂತಿನಲ್ಲಿ ಕೆಎ21 ಎಂಬಿ0039 ನೋಂದಣಿ ಸಂಖ್ಯೆಯ ವಾಹನ ಚಾಲಕ ಹಣ ಪಾವತಿಸುವಂತೆ ತಿಳಿಸಿದರೂ ಹಣ ಪಾವತಿಸದೆ ಏನು ಮಾಡುತ್ತೀಯಾ ಮಾಡು ಎಂದು ಹೇಳಿ ಗೇಟ್ ತುಂಡು ಮಾಡಿ ಹೋಗಿದ್ದಾನೆ.  ಹೆದ್ದಾರಿ ಪ್ರಾಧಿಕಾರದ ಸೊತ್ತಾಗಿರುವ ಟೋಲ್ ಪ್ಲಾಝಾಕ್ಕೆ ಹಾನಿ ಮಾಡಿ ಸರಕಾರಕ್ಕೆ 5 ಸಾವಿರ ರೂಪಾಯಿ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಹಣ ನೀಡದೆ ಗೇಟ್ ತುಂಡು ಮಾಡಿ ತೆರಳಿದ ಚಾಲಕ : ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top