ಜುಲೈ 1ರಿಂದ ಪಾಸ್ ಪೋರ್ಟ್ ಸೇವೆಗಳು ದುಬಾರಿ : 14 ವರ್ಷಗಳ ಬಳಿಕ ದರ ಪರಿಷ್ಕರಣೆ ಮಾಡಿದ ಕೇಂದ್ರ ಸರಕಾರ - Karavali Times ಜುಲೈ 1ರಿಂದ ಪಾಸ್ ಪೋರ್ಟ್ ಸೇವೆಗಳು ದುಬಾರಿ : 14 ವರ್ಷಗಳ ಬಳಿಕ ದರ ಪರಿಷ್ಕರಣೆ ಮಾಡಿದ ಕೇಂದ್ರ ಸರಕಾರ - Karavali Times

728x90

26 June 2026

ಜುಲೈ 1ರಿಂದ ಪಾಸ್ ಪೋರ್ಟ್ ಸೇವೆಗಳು ದುಬಾರಿ : 14 ವರ್ಷಗಳ ಬಳಿಕ ದರ ಪರಿಷ್ಕರಣೆ ಮಾಡಿದ ಕೇಂದ್ರ ಸರಕಾರ

ನವದೆಹಲಿ, ಜೂನ್ 26, 2026 (ಕರಾವಳಿ ಟೈಮ್ಸ್) : ಸುಮಾರು 14 ವರ್ಷಗಳ ಬಳಿಕ ಕೇಂದ್ರ ಸರಕಾರ ಪಸ್ ಪೋರ್ಟ್ ಸೇವೆಗಳ ಶುಲ್ಕಗಳನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಈ ಮೂಲಕ ಪಾಸ್ ಪೋರ್ಟ್ ಸೇವೆಗಳನ್ನು ಪಡೆದುಕೊಳ್ಳಲು ಬಯಸುವ ಮಂದಿಗೆ ಕೇಂದ್ರ ಸರಕಾರ ಬಿಗ್ ಶಾಕ್ ನೀಡಿದೆ. ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಸೂಚನೆ ಹೊರಡಿಸಿದ ಬಳಿಕ ಜುಲೈ 1 ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ಸಾಮಾನ್ಯ ಪಾಸ್‍ಪೆÇೀರ್ಟ್ ಪಡೆಯುವ ಶುಲ್ಕ 2,500/- ರೂಪಾಯಿಗಳಿಗೆ ಏರಿಸಿರುವ ಸರಕಾರ ತತ್ಕಾಲ್ ಯೋಜನೆ ಅಡಿಯಲ್ಲಿ ಪಾಸ್ ಪೆÇೀರ್ಟ್ ಪಡೆಯುವ ಶುಲ್ಕವನ್ನು 5 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದೆ. ಜುಲೈ 1 ರಿಂದ ಹೊಸ ದರ ಜಾರಿಯಾಗಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 

ಹೊಸ ದರಗಳ ಪ್ರಕಾರ 18 ಅಥವಾ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಅರ್ಜಿದಾರರಿಗೆ 36 ಪುಟಗಳ ಪಾಸ್‍ಪೆÇೀರ್ಟ್ ಶುಲ್ಕವನ್ನ 1,500/- ರೂಪಾಯಿಯಿಂದ 2,500/- ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ತತ್ಕಾಲ್ ಶುಲ್ಕವನ್ನು 3,500/- ಗಳಿಂದ 5 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. 60 ಪುಟಗಳ ಜಂಬೋ ಪಾಸ್ ಪೆÇೀರ್ಟ್ ಶುಲ್ಕವನ್ನು ಸಾಮಾನ್ಯ ವರ್ಗದ ಅಡಿಯಲ್ಲಿ 2 ಸಾವಿರದಿಂದ ಮೂರೂವರೆ ಸಾವಿರ ರೂಪಾಯಿಗಳಿಗೆ ಮತ್ತು ತತ್ಕಾಲ್ ಅಡಿಯಲ್ಲಿ 6 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. 

2012 ರಲ್ಲಿ ಕೊನೆಯ ಬಾರಿಗೆ ಪಾಸ್‍ಪೆÇೀರ್ಟ್ ಶುಲ್ಕವನ್ನ ಹೆಚ್ಚಿಸಲಾಗಿತ್ತು, ಇದೀಗ 14 ವರ್ಷಗಳ ಬಳಿಕ ಕೇಂದ್ರ ಸರ್ಕಾರ ದರ ಏರಿಕೆ ಮಾಡುತ್ತಿದೆ. ಪಾಸ್ ಪೆÇೀರ್ಟ್‍ಗಳ (ತಿದ್ದುಪಡಿ) ನಿಯಮ, 2026ರನ್ವಯ ವಿದೇಶಾಂಗ ಸಚಿವಾಲಯ ದರ ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ. ಹೊಸ ದರವು ಜುಲೈ 1 ರಿಂದಲೇ ಜಾರಿಗೆ ಬರಲಿದೆ.

ಇದಲ್ಲದೇ ಕಳೆದು ಹೋದ ಅಥವಾ ಹಾನಿಗೊಳಗಾದ ಪಾಸ್ ಪೆÇೀರ್ಟ್ ಬದಲಿಸಲು ಕೂಡಾ ದುಪ್ಪಟ್ಟು ದರ ವಿಧಿಸಲಾಗಿದ್ದು, 36 ಪುಟಗಳ ಪಾಸ್ ಪೋರ್ಟ್ ಗೆ 5 ಸಾವಿರ ರೂಪಾಯಿ, ತತ್ಕಾಲ್ ಯೋಜನೆಯಡಿ 7,500/- ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. 60 ಪುಟಗಳ ಬದಲಿ ಪಾಸ್ ಪೆÇೀರ್ಟ್‍ಗೆ ಸಾಮಾನ್ಯಕ್ಕೆ 6 ಸಾವಿರ ಹಾಗೂ ತತ್ಕಾಲ್ ಅಡಿಯಲ್ಲಿ 8,500/- ರೂಪಾಯಿ ಪಾವತಿಸಬೇಕಾಗುತ್ತದೆ.

ಅಪ್ರಾಪ್ತರ ಪಾಸ್ ಪೋರ್ಟ್ ಸೇವೆಗೂ ಸರಕಾರ ದರ ಹೆಚ್ಚಿಸಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅರ್ಜಿದಾರರಿಗೆ 36 ಪುಟಗಳ ಹೊಸ ಅಥವಾ ಮರು ಪಾಸ್ ಪೆÇೀರ್ಟ್ ಪಡೆಯಲು ಸಾಮಾನ್ಯ ಯೋಜನೆಯಡಿಯಲ್ಲಿ 1,750/- ರೂಪಾಯಿ ಹಾಗೂ ತತ್ಕಾಲ್ ಅಡಿಯಲ್ಲಿ 4,250/- ರೂಪಾಯೊ ಶುಲ್ಕವಾಗಲಿದೆ. ಜೊತೆಗೆ ಅಪ್ರಾಪ್ತ ವಯಸ್ಕರು ಕಳೆದು ಹೋದ ಅಥವಾ ಹಾನಿಗೊಳಗಾದ ಪಾಸ್ ಪೆÇೀರ್ಟ್ ಬದಲಾಯಿಸಲು ಸಾಮಾನ್ಯ ಯೋಜನೆ ಅಡಿ 4,250/- ರೂಪಾಯಿ ಹಾಗೂ ತತ್ಕಾಲ್ ಅಡಿಯಲ್ಲಿ 6,750/- ರೂಪಾಯಿ ನಿಗದಿಪಡಿಸಲಾಗಿದೆ.

1967 ರ ಪಾಸ್ ಪೆÇೀರ್ಟ್ ಕಾಯ್ದೆಯ ಸೆಕ್ಷನ್ 24ರಡಿಯಲ್ಲಿ ಜೂನ್ 20 ರಂದು ಹೊರಡಿಸಲಾದ ಅಧಿಸೂಚನೆಯು ಹಲವಾರು ಪ್ರಯಾಣ ದಾಖಲೆಗಳು ಮತ್ತು ಪಾಸ್ ಪೆÇೀರ್ಟ್ ಸಂಬಂಧಿತ ಸೇವೆಗಳಿಗೆ ಶುಲ್ಕವನ್ನು ಪರಿಷ್ಕರಿಸುತ್ತದೆ.

ತುರ್ತು ಪ್ರಮಾಣ ಪತ್ರಗಳನ್ನು ಭಾರತದಲ್ಲಿ ಉಚಿತವಾಗಿ ನೀಡುವುದನ್ನು ಮುಂದುವರಿಸಿದ್ದರೂ, ವಿದೇಶದಲ್ಲಿರುವ ಅರ್ಜಿದಾರರಿಗೆ 15 ಅಮೆರಿಕನ್ ಡಾಲರ್ ಶುಲ್ಕ ವಿಧಿಸಲಾಗುತ್ತದೆ. ಗುರುತಿನ ಪ್ರಮಾಣ ಪತ್ರಕ್ಕೆ ಭಾರತದಲ್ಲಿ 1,000 ರೂಪಾಯಿ ಹಾಗೂ ವಿದೇಶದಲ್ಲಿ 50 ಡಾಲರ್ ಶುಲ್ಕವಿರುತ್ತದೆ.

ಪೆÇಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರಗಳು (ಪಿಸಿಸಿ), ಶರಣಾಗತಿ ಪ್ರಮಾಣ ಪತ್ರಗಳು, ವಿದೇಶಿ ಕಾರ್ಯಕ್ರಮದ ಪರಿಶೀಲನೆ ಮತ್ತು ಇತರ ವಿವಿಧ ಪಾಸ್ ಪೆÇೀರ್ಟ್ ಸಂಬಂಧಿತ ಪ್ರಮಾಣ ಪತ್ರಗಳ ಶುಲ್ಕವನ್ನು ಭಾರತದಲ್ಲಿ 750/- ರೂಪಾಯಿ ಹಾಗೂ ವಿದೇಶದಲ್ಲಿ 40 ಡಾಲರ್ ಗಳಿಗೆ ನಿಗದಿಪಡಿಸಲಾಗಿದೆ.

ಎಂಟು ವರ್ಷ ವಯಸ್ಸಿನ ಮಕ್ಕಳು ಮತ್ತು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಹೊಸದಾಗಿ ಸಲ್ಲಿಸುವ ಪಾಸ್ ಪೆÇೀರ್ಟ್ ಅರ್ಜಿಗೆ ಶೇ 10 ರಷ್ಟು ಸರ್ಕಾರದ ರಿಯಾಯಿತಿ ಯಥಾಸ್ಥಿತಿ ಇರಲಿದ್ದು, ರಿಯಾಯಿತಿಯು ಹೊಸ ಪಾಸ್ ಪೆÇೀರ್ಟ್ ಗಳಿಗೆ ಮಾತ್ರ ಲಭ್ಯವಿರುತ್ತದೆ. ಮರು ಹಂಚಿಕೆಗೆ ಇರುವುದಿಲ್ಲ.

ಪಾಸ್ ಪೋರ್ಟ್ ಸಿಂಧುತ್ವದ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಯಸ್ಕರಿಗೆ ಪಾಸ್ ಪೆÇೀರ್ಟ್ ಸಿಂಧುತ್ವವು 10 ವರ್ಷಗಳು ಮತ್ತು ಅಪ್ರಾಪ್ತ ವಯಸ್ಕರಿಗೆ ಐದು ವರ್ಷಗಳು ಅಥವಾ ಹೋಲ್ಡರ್ 18 ವರ್ಷ ತುಂಬುವವರೆಗೆ ಮೊದಲು ಹೇಗಿತ್ತು ಅದೇ ರೀತಿಯಲ್ಲಿ ಇರಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜುಲೈ 1ರಿಂದ ಪಾಸ್ ಪೋರ್ಟ್ ಸೇವೆಗಳು ದುಬಾರಿ : 14 ವರ್ಷಗಳ ಬಳಿಕ ದರ ಪರಿಷ್ಕರಣೆ ಮಾಡಿದ ಕೇಂದ್ರ ಸರಕಾರ Rating: 5 Reviewed By: karavali Times
Scroll to Top