ಬಂಟ್ವಾಳ, ಜೂನ್ 29, 2026 (ಕರಾವಳಿ ಟೈಮ್ಸ್) : ಸರಕಾರಿ ಬಸ್ಸಿಗೆ ಕಾರು ಅಡ್ಡ ಇಟ್ಟು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಬಂಟ್ವಾಳ ಬೈಪಾಸಿನಲ್ಲಿ ಜೂನ್ 26 ರಂದು ರಾತ್ರಿ ವೇಳೆ ನಡೆದಿದೆ.
ಈ ಬಗ್ಗೆ ಸರಕಾರಿ ಬಸ್ ಚಾಲಕ ಚಿಕ್ಕಮಗಳೂರು ನಿವಾಸಿ ವಸಂತ ಕುಮಾರ್ ಕೆ ಬಿ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಇವರು ಕೆ ಎಸ್ ಆರ್ ಟಿ ಸಿ ಮೂಡಿಗೆರೆ ಘಟಕದ ಕೆಎ42 ಎಫ್ 2184 ನೋಂದಣಿ ಸಂಖ್ಯೆಯ ಬಸ್ಸಿನ ಚಾಲಕರಾಗಿದ್ದು, ಜೂನ್ 26 ರಂದು ಇವರು ಚಾಲಕರಾಗಿಯೂ ಹಾಗೂ ಕೇಶವ ಮೂರ್ತಿ ಅವರು ನಿರ್ವಾಹಕರಾಗಿಯೂ ಕರ್ತವ್ಯದಲ್ಲಿದ್ದು, ಮದ್ಯಾಹ್ನ 1.30ರ ವೇಳೆಗೆ ಮೂಡುಗೆರೆಯಿಂದ ಕಡೂರಿಗೆ ಹೋಗಿ ಕಡೂರಿನಿಂದ ಸಂಜೆ 4.15ಕ್ಕೆ ಮಂಗಳೂರಿಗೆ ಬಿಟ್ಟಿದ್ದು ಚಿಕ್ಕಮಗಳೂರು-ಉಜಿರೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಾ ರಾತ್ರಿ 8.45ಕ್ಕೆ ಬಂಟ್ವಾಳ ಬೈಪಾಸು ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ವೇಳೆ ಕೆಎ19 ಎಂಎಂ0064 ನೋಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕ ಬಸ್ಸಿಗೆ ಅಡ್ಡವಾಗಿ ನಿಲ್ಲಿಸಿ ಬಸ್ಸು ಮುಂದಕ್ಕೆ ಹೋಗದಂತೆ ತಡೆದು ಅದರ ಚಾಲಕಿ ಮಹಿಳೆಯೊಬ್ಬರು ಕಾರಿನಿಂದಿಳಿದು ಬಂದು ಸರಕಾರಿ ಬಸ್ಸಿನ ಚಾಲಕರಲ್ಲಿ ನಿನಗೆ ಕಣ್ಣು ಕಾಣಿಸುವುದಲ್ಲವೇ ಕಾರಿಗೆ ಡಿಕ್ಕಿ ಹೊಡೆದು ಬಂದಿರುತ್ತಿ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಸ್ವಲ್ಪ ಸಮಯದಲ್ಲಿ ಕೆಎ02 ಎಂವಿ0696 ನೋಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕ ಬಸ್ಸು ಮುಂದೆ ಹೋಗದಂತೆ ಅಡ್ಡಲಾಗಿ ನಿಲ್ಲಿಸಿ ಅದರಿಂದ ಇಬ್ಬರು ಇಳಿದು ಕೆಳಗೆ ಬಂದು ಬಸ್ಸು ಚಾಲಕರಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಪಡಿಸಿರುತ್ತಾರೆ ಎಂದು ಬಸ್ಸು ಚಾಲಕ ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕಿ ಕೂಡಾ ಪ್ರತಿ ದೂರು ನೀಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಸರಕಾರಿ ಬಸ್ ಚಾಲಕ ಮಹಿಳೆಗೆ ಅವಮಾನವಾಗುವ ರೀತಿಯಲ್ಲಿ ಅವಾಚ್ಯವಾಗಿ ಬೈದಿರುತ್ತಾರೆ ಎಂದು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.















0 comments:
Post a Comment