ಬಂಟ್ವಾಳ, ಜೂನ್ 29, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಅಟೋ ರಿಕ್ಷಾ ಕಳವುಗೈದ ಘಟನೆ ಜೂನ್ 25 ರಂದು ಸಂಜೆ ನಡೆದಿದೆ.
ಅರಳ ಗ್ರಾಮದ ನಿವಾಸಿ ಭುವನೇಶ್ವರ (42) ಅವರು ತನ್ನ ಕೆಎ19 ಎಎ2420 ನೋಂದಣಿ ಸಂಖ್ಯೆಯ ಆಟೋ ರಿಕ್ಷಾವನ್ನು ಜೂನ್ 25 ರಂದು ಸಂಜೆ 4.20ಕ್ಕೆ ಬಿ ಸಿ ರೋಡು ಚಂಡಿಕಾ ಪರಮೇಶ್ವರಿ ದೇವಸ್ಥಾನದ ಬಳಿ ನಿಲ್ಲಿಸಿ ಬಿ ಸಿ ರೋಡು ಪೇಟೆಗೆ ಹೋಗಿ ವಾಪಾಸು ಸಂಜೆ 5 ಗಂಟೆಗೆ ಬಂದು ನೋಡಿದಾಗ ಆಟೋ ರಿಕ್ಷಾ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿದ್ದಾರೆ. ಕಳವಾದ ಆಟೋ ರಿಕ್ಷಾದ ಮೌಲ್ಯ 40 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಭುವನೇಶ್ವರ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment