ಸಾಲೆತ್ತೂರಿನಲ್ಲಿ ಎ.ಬಿ. ಪೆಟ್ರೋಲ್ ಪಂಪ್ ಲೋಕಾರ್ಪಣೆ : ವಾಹನ ಸವಾರರ ಕಿಲೋ ಮೀಟರ್ ಅಂತರದ ಬವಣೆಗೆ ಪರಿಹಾರ - Karavali Times ಸಾಲೆತ್ತೂರಿನಲ್ಲಿ ಎ.ಬಿ. ಪೆಟ್ರೋಲ್ ಪಂಪ್ ಲೋಕಾರ್ಪಣೆ : ವಾಹನ ಸವಾರರ ಕಿಲೋ ಮೀಟರ್ ಅಂತರದ ಬವಣೆಗೆ ಪರಿಹಾರ - Karavali Times

728x90

28 July 2026

ಸಾಲೆತ್ತೂರಿನಲ್ಲಿ ಎ.ಬಿ. ಪೆಟ್ರೋಲ್ ಪಂಪ್ ಲೋಕಾರ್ಪಣೆ : ವಾಹನ ಸವಾರರ ಕಿಲೋ ಮೀಟರ್ ಅಂತರದ ಬವಣೆಗೆ ಪರಿಹಾರ

ಬಂಟ್ವಾಳ, ಜುಲೈ 28 2026 (ಕರಾವಳಿ ಟೈಮ್ಸ್) : ಹಲವು ಕಿಲೋ ಮೀಟರ್ ಅಂತರದ ಪೆಟ್ರೋಲ್ ಬಂಕ್ ಅಭಾವ ಇದೀಗ ನೀಗಿದೆ. ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ಎ ಬಿ ಫ್ಯಾಮಿಲಿ ನೇತೃತ್ವದಲ್ಲಿ ಎ ಬಿ ಪೆಟ್ರೋಲ್ ಬಂಕ್ ಜುಲೈ 27 ರಂದು ಸಾರ್ವಜನಿಕರಿಗೆ ಅರ್ಪಣೆಗೊಂಡಿದೆ. ಸಜಿಪಮೂಡ ಗ್ರಾಮದ ಕಾರಾಜೆ ಎಂಬಲ್ಲಿರುವ ಪೆಟ್ರೋಲ್ ಬಂಕ್ ಬಿಟ್ಟರೆ ವಿಟ್ಲ ಹಾಗೂ ಕೇರಳ ಗಡಿ ಭಾಗದ ಮೆದು-ಕೂಡುರಸ್ತೆ ಎಂಬಲ್ಲಿ ಪೆಟ್ರೋಲ್ ಬಂಕ್ ಕಾರ್ಯಾಚರಿಸುತ್ತಿತ್ತು. ಈ ನಡುವೆ ಹಲವು ಕಿ ಲೋ ಮೀಟರ್ ದೂರದಲ್ಲಿ ಪೆಟ್ರೋಲ್ ಬಂಕ್ ಇಲ್ಲದೆ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಗಿತ್ತು. ಇದೀಗ ಎ ಬಿ ಸಹೋದರರ ನೇತೃತ್ವದಲ್ಲಿ ಎಬಿ ಫ್ಯಾಮಿಲಿ ಮಾಲಕತ್ವದಲ್ಲಿ ನೂತನ ಬಂಕ್ ಸ್ಥಾಪಿಸುವ ಮೂಲಕ ವಾಹನ ಸವಾರರಿಗೆ ಉಪಯುಕ್ತವಾಗಿದೆ. 

ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸಯ್ಯಿದ್ ತಲಕ್ಕಿ ತಂಙಳ್, ಸಯ್ಯಿದ್ ಮದಕ ತಂಙಳ್, ಪಾತೂರು ಉಸ್ತಾದ್, ಮುಹಮ್ಮದ್ ಅಲಿ ಸಖಾಫಿ ಸುರಿಬೈಲು, ಎಣ್ಮೂರು ಉಸ್ತಾದ್, ಮುಹಮ್ಮದ್ ಅಲಿ ಫೈಝಿ ಬಾಳೆಪುಣಿ, ನಾಟೆಕಲ್ ರಹ್ಮಾನಿಯಾ ಜುಮಾ ಮಸೀದಿ ಖತೀಬ್ ಕೆ ಬಿ ದಾರಿಮಿ, ಸಾಲೆತ್ತೂರು, ಬಿ ಎಚ್ ನಗರ ಜುಮಾ ಮಸೀದಿಗಳ ಖತೀಬರು, ಸಾಲೆತ್ತೂರು ಶಿವಗಿರಿ ಶಿವಗಿರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಭಾರ್ಗವ ಉಡುಪ, ನಿತ್ಯಾಧರ್ ಚರ್ಚ್ ಧರ್ಮಗುರು ರೆ ಫಾ ಮನೋಜ್ ಫುರ್ಟಾಡೋ, ಮಾಜಿ ಸಚಿವ ಬಿ ರಮಾನಾಥ ರೈ, ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದ ಕ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮುಹಮ್ಮದ್ ಅಲಿ ಪುತ್ತೂರು, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಯೇನಪೋಯ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ ಗಣೇಶ್ ಪ್ರಸಾದ್, ಪ್ರಮುಖರಾದ ಉಷಾ ಅಂಚನ್, ಮಾಧವ ಮಾವೆ, ಮಂಜುಳಾ ಮಾವೆ, ಅಝೀಝ್ ಕೊಳ್ನಾಡು, ಇಂಡಿಯನ್ ಆಯಿಲ್ ಕಂಪೆನಿಯ ವಿವಿಧ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಎ ಬಿ ಫ್ಯಾಮಿಲಿಯ ಪ್ರಮುಖ ಎ ಬಿ ಅಬ್ದುಲ್ಲ ಸ್ವಾಗತಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸಾಲೆತ್ತೂರಿನಲ್ಲಿ ಎ.ಬಿ. ಪೆಟ್ರೋಲ್ ಪಂಪ್ ಲೋಕಾರ್ಪಣೆ : ವಾಹನ ಸವಾರರ ಕಿಲೋ ಮೀಟರ್ ಅಂತರದ ಬವಣೆಗೆ ಪರಿಹಾರ Rating: 5 Reviewed By: karavali Times
Scroll to Top