ಬಿ.ಸಿ.ರೋಡು : ಕಂಟೈನರ್ ಲಾರಿಯ ಚಕ್ರ ಕಳಚಿ ರಸ್ತೆ ಬದಿ ಹೋಗುತ್ತಿದ್ದ ಮಹಿಳೆಗೆ ಗಾಯ - Karavali Times ಬಿ.ಸಿ.ರೋಡು : ಕಂಟೈನರ್ ಲಾರಿಯ ಚಕ್ರ ಕಳಚಿ ರಸ್ತೆ ಬದಿ ಹೋಗುತ್ತಿದ್ದ ಮಹಿಳೆಗೆ ಗಾಯ - Karavali Times

728x90

25 July 2026

ಬಿ.ಸಿ.ರೋಡು : ಕಂಟೈನರ್ ಲಾರಿಯ ಚಕ್ರ ಕಳಚಿ ರಸ್ತೆ ಬದಿ ಹೋಗುತ್ತಿದ್ದ ಮಹಿಳೆಗೆ ಗಾಯ

ಬಂಟ್ವಾಳ, ಜುಲೈ 25 2026 (ಕರಾವಳಿ ಟೈಮ್ಸ್) : ಕಂಟೇನರ್ ಲಾರಿಯ ಚಕ್ರ ಕಳಚಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ತಾಗಿ ಗಾಯಗೊಂಡ ಘಟನೆ ಬಿ ಸಿ ರೋಡು ಕರ್ನಾಟಕ ಬ್ಯಾಂಕ್ ಎದುರಿನ ಹೆದ್ದಾರಿಯಲ್ಲಿ ಉಲೈ 23 ರಂದು ಸಂಭವಿಸಿದೆ. 

ಗಾಯಗೊಂಡ ಮಹಿಳೆಯನ್ನು ಮೊಡಂಕಾಪು ನಿವಾಸಿ ಪ್ರೆಸಿಲ್ಲಾ ಬಿ ಡಿ ಸೋಜ ಎಂದು ಹೆಸರಿಸಲಾಗಿದೆ. ಇವರು ಜುಲೈ 23 ರಂದು ಬೆಳಿಗ್ಗೆ 10.17 ರ ವೇಳೆಗೆ ಬಿ ಸಿ ರೋಡಿನ ಕರ್ನಾಟಕ ಬ್ಯಾಂಕ್ ಎದುರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಮೊಹಮ್ಮದ್ ಸಲೀಂ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯ ಹಿಂಬದಿ ಚಕ್ರ ಕಳಚಿ ಪ್ರಸಿಲ್ಲಾ ಅವರಿಗೆ ತಾಗಿದೆ. ಪರಿಣಾಮ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗಾಯಾಳು ಮಹಿಳೆಯ ಪುತ್ರ ವಿಶಾಲ್ ಡಿ ಸೋಜ (32) ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಕಂಟೈನರ್ ಲಾರಿಯ ಚಕ್ರ ಕಳಚಿ ರಸ್ತೆ ಬದಿ ಹೋಗುತ್ತಿದ್ದ ಮಹಿಳೆಗೆ ಗಾಯ Rating: 5 Reviewed By: karavali Times
Scroll to Top