ಶಂಭೂರು ಎಎಂಆರ್ ಡ್ಯಾಮಿನ ಟ್ರಾಶ್ ಮೆಶಿನ್ನಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ - Karavali Times ಶಂಭೂರು ಎಎಂಆರ್ ಡ್ಯಾಮಿನ ಟ್ರಾಶ್ ಮೆಶಿನ್ನಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ - Karavali Times

728x90

25 July 2026

ಶಂಭೂರು ಎಎಂಆರ್ ಡ್ಯಾಮಿನ ಟ್ರಾಶ್ ಮೆಶಿನ್ನಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

ಬಂಟ್ವಾಳ, ಜುಲೈ 25 2026 (ಕರಾವಳಿ ಟೈಮ್ಸ್) : ಶಂಭೂರು ಎಎಂಆರ್ ಡ್ಯಾಂನ ಟ್ರಾಶ್ ಮೆಶಿನಿನಲ್ಲಿ ಸುಮಾರು 60 ವರ್ಷದ ಪ್ರಾಯದ ಅಪರಿಚಿತ ಹೆಂಗಸಿನ ಮೃತದೇಹ ಜುಲೈ 24 ರಂದು ಪತ್ತೆಯಾಗಿದೆ. 

ಈ ಬಗ್ಗೆ ಡ್ಯಾಂನ ಎಚ್ ಆರ್ ವಿಭಾಗದ ಮ್ಯಾನೇಜರ್ ಉಳಾಯಿಬೆಟ್ಟು ನಿವಾಸಿ ನಾಗರಾಜ್ ಶೆಟ್ಟಿ (40) ಅವರು ಪೊಲೀಸರಿಗೆ ದೂರು ನೀಡಿದ್ದು, ಜುಲೈ 24 ರಂದು ಸಂಜೆ 7.15ರ ವೇಳೆಗೆ ಎಎಂಆರ್ ಡ್ಯಾಮಿನ ಕಸ ತೆಗೆಯುವ ಸಾಧನದಲ್ಲಿ ಸುಮಾರು 60 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಮೃತದೇಹ ಅರೆ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ನೇತ್ರಾವತಿ ನದಿಯಲ್ಲಿ ಕೊಚ್ಚಿ ಬಂದು ಡ್ಯಾಮಿನ ಟ್ರಾಶ್ ಮೆಶಿನಿನಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಶಂಭೂರು ಎಎಂಆರ್ ಡ್ಯಾಮಿನ ಟ್ರಾಶ್ ಮೆಶಿನ್ನಿನಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ Rating: 5 Reviewed By: karavali Times
Scroll to Top