ಬಂಟ್ವಾಳ, ಜುಲೈ 17, 2026 (ಕರಾವಳಿ ಟೈಮ್ಸ್) : ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ಅತ್ತಳಿಕೆ ಎಂಬಲ್ಲಿನ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ಮೀರಿದ ಟಿಪ್ಪರ್ ಲಾರಿಯೊಂದು ಉರುಳಿ ಬಿದ್ದು ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಜುಲೈ 15 ರಂದು ಸಂಭವಿಸಿದೆ.
ಗಾಯಗೊಂಡವರನ್ನು ಟಿಪ್ಪರ್ ಚಾಲಕ ಸುನಿಲ್, ಕ್ಲೀನರ್ ಪ್ರಮೋದ್ ಹಾಗೂ ಲೋಡರ್ ಜಯ ಎಂದು ಹೆಸರಿಸಲಾಗಿದೆ. ಮುನ್ನಲಾಯಿಪದವು ಕಡೆಯಿಂದ ಅಲ್ಲಿಪಾದೆ ಚರ್ಚ್ ಕಡೆಗೆ ಕೆಂಪು ಕಲ್ಲುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ಮೀರಿ ಉರುಳಿ ಬಿದ್ದು ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸಂದೀಪ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment