ಬಂಟ್ವಾಳ, ಜುಲೈ 30, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಆಡಳಿತ ಸೌಧ ಕಟ್ಟಡದ ಸರ್ವೆ ಇಲಾಖೆಯ ಎ ಡಿ ಎಲ್ ಆರ್ ಕಚೇರಿಯಲ್ಲಿ ಮಳೆಗಾಲದಲ್ಲಿ ತೀವ್ರ ನೀರು ಸೋರಿಕೆಯಾಗುತ್ತಿದ್ದು, ಇಲ್ಲಿನ ದಾಖಲೆ ಪತ್ರಗಳ ಭದ್ರತೆ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿ ಸಿ ರೋಡು ಮಿನಿ ವಿಧಾನಸೌಧ ಕಟ್ಟಡ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಲಿಫ್ಟ್ ಸಮಸ್ಯೆ, ಸ್ವಚ್ಛತೆ ಸಮಸ್ಯೆ, ಶೌಚಾಲಯ ಸಮಸ್ಯೆ ಮೊದಲಾದ ಹಲವು ಸಮಸ್ಯೆಗಳ ಆಗರವಾಗಿರುವ ಮಿನಿವಿಧಾನಸೌಧ ಕಟ್ಟಡ ಇದೀಗ ಮಳೆಗಾಲದಲ್ಲಿ ಇಲ್ಲಿನ ಎ ಡಿ ಎಲ್ ಆರ್ ಕಚೇರಿಯೊಳಗೆ ಸೋರುತ್ತಿದ್ದು, ಇಡೀ ಕಚೇರಿ ತೇವಾಂಶದಿಂದ ತೋಯ್ದು ಹೋಗಿದೆ. ಕಚೇರಿಯುದ್ದಕ್ಕೂ ತೇವಾಂಶ ಇರುವುದರಿಂದ ಇಲ್ಲಿನ ದಾಖಲೆ ಪತ್ರಗಳು, ಕಡತಗಳ ಭದ್ರತೆ ಬಗ್ಗೆ ಸಾರ್ವಜನಿಕರಿಗೆ ಆತಂಕ ಎದುರಾಗಿದೆ. ಕಚೇರಿಯ ಗೋಡೆ, ನೆಲ ಮಹಡಿ ಸಹಿತ ಎಲ್ಲೆಂದರಲ್ಲಿ ನೀರು ಸೋರಿಕೆಯಾಗುತ್ತಿರುವ ದೃಶ್ಯ ಕಂಡು ಬರುತ್ತಿದ್ದು, ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೂ ಕೂಡಾ ಸಮಸ್ಯೆ ಎದುರಿಸುವಂತಾಗಿದೆ.
ಇಲ್ಲಿನ ಸೋರಿಕೆ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಿ ಸೂಕ್ತ ಸಮಯದಲ್ಲಿ ಶೀಘ್ರ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

















0 comments:
Post a Comment