ಶಾಲಾ ಬಸ್ ದುರಂತಕ್ಕೆ ಮಾಜಿ ಸಚಿವ ರಮಾನಾಥ ರೈ ದುಃಖ ಹಾಗೂ ಸಂತಾಪ - Karavali Times ಶಾಲಾ ಬಸ್ ದುರಂತಕ್ಕೆ ಮಾಜಿ ಸಚಿವ ರಮಾನಾಥ ರೈ ದುಃಖ ಹಾಗೂ ಸಂತಾಪ - Karavali Times

728x90

22 July 2026

ಶಾಲಾ ಬಸ್ ದುರಂತಕ್ಕೆ ಮಾಜಿ ಸಚಿವ ರಮಾನಾಥ ರೈ ದುಃಖ ಹಾಗೂ ಸಂತಾಪ

ಬಂಟ್ವಾಳ, ಜುಲೈ 22, 2026 (ಕರಾವಳಿ ಟೈಮ್ಸ್) : ಬರಿಮಾರು ಎಂಬಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ಪುಟಾಣಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ತೀವ್ರ ದುಃಖ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರು ಮೃತ ಬಾಲಕಿಯ ಕುಟುಂಬಕ್ಕೆ ತಮ್ಮ ಆಳವಾದ ಸಂತಾಪ ಮತ್ತು ಸಾಂತ್ವನವನ್ನು ಸೂಚಿಸಿದ್ದಾರೆ. ಗಾಯಗೊಂಡಿರುವ ವಿದ್ಯಾರ್ಥಿಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿರುವ ಅವರು, ಸಂಬಂಧಪಟ್ಟ ಆಸ್ಪತ್ರೆಯ ಅಧಿಕಾರಿಗಳು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ರಮಾನಾಥ ರೈ ಅವರು ಮನವಿ ಮಾಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಶಾಲಾ ಬಸ್ ದುರಂತಕ್ಕೆ ಮಾಜಿ ಸಚಿವ ರಮಾನಾಥ ರೈ ದುಃಖ ಹಾಗೂ ಸಂತಾಪ Rating: 5 Reviewed By: karavali Times
Scroll to Top