ವಾಹನಗಳ ಬ್ಯಾಟರಿ ಕಳವು ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು : ಜೈಲಿನಲ್ಲಿದ್ದ ಆರೋಪಿಯನ್ನು ಕಸ್ಟಡಿಗೆ ಪಡೆದು ಬ್ಯಾಟರಿ ವಶಪಡಿಸಿಕೊಂಡ ಪೊಲೀಸರು - Karavali Times ವಾಹನಗಳ ಬ್ಯಾಟರಿ ಕಳವು ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು : ಜೈಲಿನಲ್ಲಿದ್ದ ಆರೋಪಿಯನ್ನು ಕಸ್ಟಡಿಗೆ ಪಡೆದು ಬ್ಯಾಟರಿ ವಶಪಡಿಸಿಕೊಂಡ ಪೊಲೀಸರು - Karavali Times

728x90

22 July 2026

ವಾಹನಗಳ ಬ್ಯಾಟರಿ ಕಳವು ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು : ಜೈಲಿನಲ್ಲಿದ್ದ ಆರೋಪಿಯನ್ನು ಕಸ್ಟಡಿಗೆ ಪಡೆದು ಬ್ಯಾಟರಿ ವಶಪಡಿಸಿಕೊಂಡ ಪೊಲೀಸರು

ಸುಳ್ಯ, ಜುಲೈ 22, 2026 (ಕರಾವಳಿ ಟೈಮ್ಸ್) : ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 14 ರಂದು ನಡೆದ ವಾಹನಗಳ 5 ಬ್ಯಾಟರಿ ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರು ಜೈಲಿನಲ್ಲಿರುವ ಆರೋಪಿಯನ್ನು ಕರೆ ತಂದು ಕಳವುಗೈದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. 

ಆರೋಪಿಯನ್ನು ಕೇರಳ ರಾಜ್ಯದ ಕಾಸರಗೋಡು ನಿವಾಸಿ ಅಬ್ದುಲ್ ಮಜೀದ್ (33) ಎಂದು ಹೆಸರಿಸಲಾಗಿದೆ. ಈತ ಈಗಾಗಲೇ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ 5 ಪ್ರಕರಣಗಳಲ್ಲಿ ಆರೋಪಿಯಾಗಿ ಜೈಲಿನಲ್ಲಿರುತ್ತಾನೆ. ಇದೀಗ ಸುಳ್ಯ ಠಾಣಾ ವ್ಯಾಪ್ತಿಯ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಬೇಧಿಸಿರುವ ಸುಳ್ಯ ಪೊಲೀಸರು ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಕಳವುಗೈದ 5 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಾಹನಗಳ ಬ್ಯಾಟರಿ ಕಳವು ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು : ಜೈಲಿನಲ್ಲಿದ್ದ ಆರೋಪಿಯನ್ನು ಕಸ್ಟಡಿಗೆ ಪಡೆದು ಬ್ಯಾಟರಿ ವಶಪಡಿಸಿಕೊಂಡ ಪೊಲೀಸರು Rating: 5 Reviewed By: karavali Times
Scroll to Top