ಲಾವಣ್ಯ ಹತ್ಯೆ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕಕ್ಕೆಪದವು ಅಂಬೇಡ್ಕರ್ ಯುವವ ಸಂಘದಿಂದ ಎಎಸ್ಪಿಗೆ ಮನವಿ - Karavali Times ಲಾವಣ್ಯ ಹತ್ಯೆ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕಕ್ಕೆಪದವು ಅಂಬೇಡ್ಕರ್ ಯುವವ ಸಂಘದಿಂದ ಎಎಸ್ಪಿಗೆ ಮನವಿ - Karavali Times

728x90

21 July 2026

ಲಾವಣ್ಯ ಹತ್ಯೆ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕಕ್ಕೆಪದವು ಅಂಬೇಡ್ಕರ್ ಯುವವ ಸಂಘದಿಂದ ಎಎಸ್ಪಿಗೆ ಮನವಿ

ಬಂಟ್ವಾಳ, ಜುಲೈ 21, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಜುಲೈ 16 ರಂದು ಅಮಾಯಕ ಯುವತಿ ಲಾವಣ್ಯ ಅವರನ್ನು ಕಡಿದು ಕೊಲೆಗೈದ ಕೊಲೆಗಾರ ಚೇತನ್ ಎಂಬ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಮುಂದಕ್ಕೆ ಬಿ ಸಿ ರೋಡಿನ ಬಸ್ ನಿಲ್ದಾಣದಲ್ಲಿ ಇಂತಹ ಸಮಾಜ ಘಾತುಕ ಘಟನೆಗಳು ನಡೆಯದಂತೆ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಕಕ್ಕೆಪದವು ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಾಜೀವ್ ಕಕ್ಕೆಪದವು ನೇತೃತ್ವದ ನಿಯೋಗ ಬಂಟ್ವಾಳ ಉಪವಿಭಾಗದ ಎಸ್ಪಿ ಅವರನ್ನು ಭೇಟಿಯಾಗಿ ಆಗ್ರಹಿಸಿದೆ. 

ತಾಲೂಕಿನ ಉಳಿ ಗ್ರಾಮದ ಹೆಣ್ಣು ಮಗಳು ಕುಮಾರಿ ಲಾವಣ್ಯಳ ಕೊಲೆ ಪ್ರಕರಣ ಇಡೀ ನಾಗರಿಕ ಸಮಾಜಕ್ಕೆ ಒಂದು ಆಘಾತಕಾರಿ ಘಟನೆ. ಜೀವನ ನಿರ್ವಹಣೆಗಾಗಿ ಕೆಲಸ ಹುಡುಕಿ ಕೆಲಸಕ್ಕಾಗಿ ಬರುವ ಹೆಣ್ಮಕ್ಕಳ ದಿನ ನಿತ್ಯದ ಓಡಾಟ ಸುರಕ್ಷತೆಯಲ್ಲಿ ಇಲ್ಲ ಎನ್ನುವುದಕ್ಕೆ ಈ ಘಟನೆ ಒಂದು ಪ್ರತ್ಯಕ್ಷ ನಿದರ್ಶನವಾಗಿದೆ. ಕುಮಾರಿ ಲಾವಣ್ಯಳ ಕೊಲೆಯನ್ನು ತೀವ್ರವಾಗಿ ಖಂಡಿಸಿದ ಸಂಘ ಜೊತೆಗೆ ಕೊಲೆಗಾರನಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಪೆÇಲೀಸ್ ಇಲಾಖೆಯು ಎಲ್ಲಾ ಸಾಕ್ಷ್ಯವನ್ನು ದಕ್ಷ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಅಗ್ರಹಿಸಿದೆ. 

ಪಾತಕಿಗೆ ಕಠಿಣ ಶಿಕ್ಷೆ ದೊರೆಯುವಂತೆ ಮಾಡಿ ಕಾನೂನು ಹಾಗೂ ಪೆÇೀಲೀಸ್ ಇಲಾಖೆಯ ಮೇಲಿನ ವಿಶ್ವಾಸ ಬಲಪಡಿಸಬೇಕು. ಕಾಲಹರಣ ಮಾಡದೆ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ತಾಲೂಕಿನ ಹೃದಯ ಭಾಗದಲ್ಲೇ ಈ ಭೀಕರ ಕೃತ್ಯ ಎಸಗಿರುವುದು ನಾಗರಿಕ ಸಮಾಜದ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆಯೂ ಪೊಲೀಸ್ ಇಲಾಖೆ ಸೂಕ್ತ ಗಮನ ಹರಿಸಿ ಪೇಟೆ ಪಟ್ಟಣಗಳಲ್ಲಿ ಸಂಪೂರ್ಣ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘ ಎಎಸ್ಪಿ ಅವರನ್ನು ಆಗ್ರಹಿಸಿದೆ. 

ನಿಯೋಗದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ರಾಜೀವ್ ಕಕ್ಕೆಪದವು, ಗೌರವಾಧ್ಯಕ್ಷ ಅಣ್ಣು ಖಂಡಿಗ, ಉಪಾಧ್ಯಕ್ಷರಾದ ಅಣ್ಣಿ ಕುರುವರ ಗೋಳಿ, ಸಂಪತ್ ಮಾಡೋಡಿ, ಕಾರ್ಯದರ್ಶಿ ಜನಾರ್ದನ, ಪ್ರಮುಖರಾದ ಡಾ ರುಕ್ಮಯ ಮಾಡೋಡಿ, ಶಂಕರ್ ಕೇರ್ಯ, ಸತೀಶ ಕಕ್ಕೆಪದವು, ಗೋಪಾಲ, ಪ್ರಸಾದ್, ಕಿನ್ನಿಗ, ರವಿ ಖಂಡಿಗ ಇದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಲಾವಣ್ಯ ಹತ್ಯೆ ಪ್ರಕರಣ : ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕಕ್ಕೆಪದವು ಅಂಬೇಡ್ಕರ್ ಯುವವ ಸಂಘದಿಂದ ಎಎಸ್ಪಿಗೆ ಮನವಿ Rating: 5 Reviewed By: karavali Times
Scroll to Top