ಅಮಾಯಕ ಹೆಣ್ಣು ಮಗಳ ಕೊಲೆ ಪ್ರಕರಣದಲ್ಲೂ ತೀಟೆ ತೀರಿಸಲು ಯತ್ನಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಕೃತಿ ಮೆರೆದವರ ವಿರುದ್ದ ಪ್ರಕರಣ ದಾಖಲು - Karavali Times ಅಮಾಯಕ ಹೆಣ್ಣು ಮಗಳ ಕೊಲೆ ಪ್ರಕರಣದಲ್ಲೂ ತೀಟೆ ತೀರಿಸಲು ಯತ್ನಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಕೃತಿ ಮೆರೆದವರ ವಿರುದ್ದ ಪ್ರಕರಣ ದಾಖಲು - Karavali Times

728x90

17 July 2026

ಅಮಾಯಕ ಹೆಣ್ಣು ಮಗಳ ಕೊಲೆ ಪ್ರಕರಣದಲ್ಲೂ ತೀಟೆ ತೀರಿಸಲು ಯತ್ನಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಕೃತಿ ಮೆರೆದವರ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ, ಜುಲೈ 17, 2026 (ಕರಾವಳಿ ಟೈಮ್ಸ್) : ಅಮಾಯಕ ಹುಡುಗಿ ಲಾವಣ್ಯಳ ಬರ್ಬರ ಹತ್ಯೆಯ ಸಂದರ್ಭದಲ್ಲೂ ಸೋಶಿಯಲ್ ನೆಟ್ ವರ್ಕ್ ವೀರರು ಎನಿಸಿಕೊಳ್ಳಲು ಬಯಸುವ ದುಷ್ಕರ್ಮಿಗಳು ತಮ್ಮ ವಿಕೃತಿ ಮೆರೆದಿದ್ದು, ಸಾಮಾಜಿಕ ಜಾಲ ತಾಣಗಳ ವಿವಿಧ ಫ್ಲಾಟ್ ಫಾರ್ಮ್ ಗಳಲ್ಲಿ ತಮ್ಮ ತೀಟೆ ತೀರುಸುವಂತಹ ಬರಹಗಳನ್ನು ಬರೆದುಕೊಂಡಿದ್ದಾರೆ. ಇಂತಹವರ ವಿರುದ್ದ ಪೊಲೀಸರು ಪ್ರಕರಣಗ ದಾಖಲಿಸಿಕೊಂಡಿದ್ದಾರೆ. 

ವಿವಿಧ ವಾಟ್ಸಪ್ ಗ್ರೂಪ್ ಗಳು ಹಾಗೂ ಇನ್ ಸ್ಟಾಗ್ರಾಂ ಖಾತೆಗಳ ಮೂಲಕ ಆರೋಪಿಯ ಭಾವಚಿತ್ರಕ್ಕೆ ಕೇಸರಿ ಶಾಲು ಹಾಗೂ ಕುಂಕುಮ ಅಳವಡಿಸಿ, ಭಜರಂಗದಳದ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹಗಳನ್ನು ಹಾಕಿರುವುದಕ್ಕೆ ಸಂಬಂದಿಸಿದಂತೆ ಟ್ರೋಲ್_ಮಾಸ್ಟರ್ _ಇನ್ಸ್ಟಾಗ್ರಾಂ ಖಾತೆ, ಯುವ ಬೆಳ್ತಂಗಡಿ ವಾಟ್ಸಪ್ ಗ್ರೂಪ್, ಪಿಪದ್ಮರಾಜ್ ಪದ್ಮರಾಜ್ ವಾಟ್ಸಪ್ ಗ್ರೂಪ್, ಯುವ ಕಾಂಗ್ರೆಸ್ ಬೆಳ್ತಂಗಡಿ ವಾಟ್ಸಪ್ ಗ್ರೂಪ್, ಫ್ಯಾಕ್ಸ್ಟ್ ಆಂಡ್ ಜಸ್ಟಿಸ್ ವಾಟ್ಸಪ್ ಗ್ರೂಪ್ ಗಳ ವಿರುದ್ದ ಅಪರಾಧ ಕ್ರಮಾಂಕ 96/2026 ಕಲಂ 196, 353(2) ಬಿ ಎನ್ ಎಸ್-2023 ಪ್ರಕರಣ ದಾಖಲಾಗಿದೆ. 

ಫೇಸ್ ಬುಕ್ ನಲ್ಲಿ ಶೈಲಜಾ ಅಮರನಾಥ್ ಎಂಬವರ ಖಾತೆಯಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಫೆÇೀಸ್ಟ್ ಹಾಕಿರುವ ಬಗ್ಗೆ ಅಪರಾಧ ಕ್ರಮಾಂಕ 97/2026 ಕಲಂ 353(2) ಬಿ ಎನ್ ಎಸ್ -2023 ರಂತೆ ಪ್ರಕರಣ ದಾಖಲಾಗಿದೆ. 

ಚೇತನ್ ಬೆಳ್ಚಡ ಎಂಬ ಫೇಸ್ ಬುಕ್ ಪೇಜಿನಲ್ಲಿ ಪ್ರಕರಣದ ಆರೋಪಿಯ ಪೆÇೀಟೋವನ್ನು ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತೆನೆಂದು ಎಡಿಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪೆÇೀಸ್ಟ್ ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/2026 ಕಲಂ 353(2) ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ. 

ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಈ ಮೇಲಿನ 3 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಮಾಯಕ ಹೆಣ್ಣು ಮಗಳ ಕೊಲೆ ಪ್ರಕರಣದಲ್ಲೂ ತೀಟೆ ತೀರಿಸಲು ಯತ್ನಿಸಿ ಸೋಶಿಯಲ್ ಮೀಡಿಯಾದಲ್ಲಿ ವಿಕೃತಿ ಮೆರೆದವರ ವಿರುದ್ದ ಪ್ರಕರಣ ದಾಖಲು Rating: 5 Reviewed By: karavali Times
Scroll to Top