ಖೋಟಾ ನೋಟು ಮುದ್ರಣ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರ ದಾಳಿ : ಏಳು ಮಂದಿ ವಶಕ್ಕೆ - Karavali Times ಖೋಟಾ ನೋಟು ಮುದ್ರಣ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರ ದಾಳಿ : ಏಳು ಮಂದಿ ವಶಕ್ಕೆ - Karavali Times

728x90

16 July 2026

ಖೋಟಾ ನೋಟು ಮುದ್ರಣ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರ ದಾಳಿ : ಏಳು ಮಂದಿ ವಶಕ್ಕೆ

ಉಪ್ಪಿನಂಗಡಿ, ಜುಲೈ 16, 2026 (ಕರಾವಳಿ ಟೈಮ್ಸ್) : ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು (ಖೋಟಾ ನೋಟುಗಳನ್ನು) ಮುದ್ರಿಸುತ್ತಿರುವ ಪ್ರಕರಣ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು 7 ಮಂದಿಯನ್ನು ಬಂಧಿಸಿದ ಘಟನೆ ಜುಲೈ 16 ರಂದು ನಡೆದಿದೆ. 

ಬಂಧಿತ ಆರೋಪಿಗಳನ್ನು ಪುತ್ತೂರು ಕಸಬ ನಿವಾಸಿ ಇಬ್ರಾಹಿಂ (60), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ನಿವಾಸಿ ಶರೀಫ (51), ಉತ್ತರ ಕನ್ನಡ ಜಿಲ್ಲೆಯ ಹರಿಯಾಳ ತಾಲೂಕು ನಿವಾಸಿ ಸಂದೀಪ ಪುಂಡಲೀಕ ಶೋಳಂಬಿ (30), ಕಾಸರಗೋಡು-ಆಮೂರು ನಿವಾಸಿ ಮಹಮ್ಮದ್ ನಬಾಸ್ (37), ಪುತ್ತೂರು-ಒಳಮೊಗ್ರು ನಿವಾಸಿ ಸಲ್ಮಾನ್ ಫಾರೀಸ್ (25), ಬೆಳ್ತಂಗಡಿ-ಉರುವಾಲು ನಿವಾಸಿ ಸಿರಾಜುದ್ದೀನ್ (34) ಹಾಗೂ ಪುತ್ತಿಲ ನಿವಾಸಿ ಇರ್ಷಾದ್ (31) ಎಂದು ಹೆಸರುಸಲಾಗಿದೆ. 

ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸೈ ಸುತೇಶ್ ಕೆ ಪಿ ಅವರ ನೇತೃತ್ವದ ಪೊಲೀಸ್ ತಂಡ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದೆ. ದಾಳಿ ವೇಳೆ ಸ್ಥಳದಲ್ಲಿ 500 ಮುಖ ಬೆಲೆಯ 1 ನೋಟು, 500 ರೂಪಾಯಿ ಮುಖ ಬೆಲೆಯ ನೋಟುಗಳಂತೆ ಕಾಣುವ ಎ4 ಸೈಝಿನ 21 ಹಾಳೆಗಳು ಹಾಗೂ ಗಣಕ ಯಂತ್ರ, ಝರಾಕ್ಸ್ ಮೆಷಿನ್ ಹಾಗೂ ಸೀಲ್ ಗಳು ಸೇರಿದಂತೆ ಇತರೆ ಸೊತ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಕೊಡಗು ಜಿಲ್ಲಾ ಎಸ್ಪಿ ಬಿಂದು ಮಣಿ ಆರ್ ಎನ್, ಹಾಗೂ ಕೊಡಗು ಜಿಲ್ಲಾ ಸಿಬ್ಬಂದಿಗಳಾದ ಯೊಗೀಶ್ ಬಿ, ನಿರಂಜನ್ ಎಂ ಎನ್, ದ ಕ ಜಿಲ್ಲಾ ವಿಶೇûಷ ಘಟಕದ ಪೆÇಲೀಸ್ ಇನ್ಸ್ ಪೆಕ್ಟರ್ ನಂದಕುಮಾರ್, ಸಿಬ್ಬಂದಿಗಳಾದ ಎಎಸ್ಸೈ ದೀಪಕ್, ಎಚ್.ಸಿ.ಗಳಾದ ಸತೀಶ್ ಹಾಗೂ ರೌಫ್ ಅವರುಗಳು ಸದ್ರಿ ಜಾಲವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವಲ್ಲಿ ಉಪ್ಪಿನಂಗಡಿ ಪಿಎಸ್ಸೈ ಅವರೊಂದಿಗೆ  ಸಹಕರಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಖೋಟಾ ನೋಟು ಮುದ್ರಣ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರ ದಾಳಿ : ಏಳು ಮಂದಿ ವಶಕ್ಕೆ Rating: 5 Reviewed By: karavali Times
Scroll to Top